ಬ್ಯಾಡ್ಗಿ

ಅಭಿವೃದ್ಧಿ ಅಧಿಕಾರಿ ವರ್ಗಾವಣೆ ಖಂಡಿಸಿ ಪ್ರತಿಭಟನೆ ಮೂಲಕ ಮನವಿ

ಅಭಿವೃದ್ಧಿ ಅಧಿಕಾರಿ ವರ್ಗಾವಣೆ ಖಂಡಿಸಿ ಪ್ರತಿಭಟನೆ ಮೂಲಕ ಮನವಿ

ಬ್ಯಾಡಗಿ 30: ತಾಲೂಕಿನ ಕಾಗಿನೆಲೆ ಗ್ರಾಮದ ಅಭಿವೃದ್ಧಿ ಅಧಿಕಾರಿ ಅವರನ್ನು ವರ್ಗಾವಣೆ ಮಾಡುತ್ತಿರುವುದನ್ನು ವಿರೋಧಿಸಿ  ಕಾಗಿನೆಲೆ ಗ್ರಾಮದ ಹಾಗೂ ಇಂಗಳಗುಂದಿ ಗ್ರಾಮದ ಗ್ರಾಮಸ್ಥರು ಇಂದು ತಾಲೂಕು ಪಂಚಾಯತಿಯ ಆವರಣದಲ್ಲಿ  ಗ್ರಾಮದ ಸಾರ್ವಜನಿಕರು ಪ್ರತಿಭಟನೆ ಮಾಡುವ ಮೂಲಕ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕೆ ಎಂ ಅಕ್ಷರ ದಾಸೋಹ ಅಧಿಕಾರಿ ಎಮ್ ಎಫ್ ಹುಲ್ಯಾಳ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. 

ಈ ವೇಳೆ ಗ್ರಾಮದ ಶಂಕರಗೌಡ ಪಾಟೀಲ ಮಾತನಾಡಿ ಗ್ರಾಮದ ಕೆಲವೂಂದು ವ್ಯಕ್ತಿಗಳು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ವೈಯಕ್ತಿಕ ದೋಷದ ಕಾರಣ ಸುಕ್ಕಸುಮ್ಮನೆ ಸುಳ್ಳು ಆರೋಪ ಮಾಡುತ್ತಿದ್ದು ಮಾನ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಾಗಿನೆಲೆ ಗ್ರಾಮಕ್ಕೆ ಬಂದಾಗಿನಿಂದಲೂ ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು ಸಾರ್ವಜನಿಕರ ಕೊಂದು ಕೊರತೆಗಳನ್ನು ನಿವಾರಿಸುತ್ತಿದ್ದು ಮತ್ತು ಯಾವುದೇ ರೀತಿಯ ಸಾರ್ವಜನಿಕ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ನಿವಾರಿಸುತ್ತಿದ್ದು ಅವರ ಮೇಲೆ ಮಾಡಿರುವ ಸುಳ್ಳು ಆರೋಪ ಮಾಡಿದ್ದು ಕಾಗಿನೆಲೆ ಗ್ರಾಮದ ಸಾರ್ವಜನಿಕರು ಮಾನ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚಿ ಅವರ ಬೆಂಬಲಕ್ಕೆ ನಿಂತಿದ್ದು ತಾವುಗಳು  ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದೆಂದು ಒತ್ತಾಯಿಸಿ ಮನವಿ ಮಾಡಿದರು.  

ಈ ಸಂದರ್ಭದಲ್ಲಿ ಮಲ್ಲೇಶ್ ಪವಾರ. ಸದಾನಂದ್ ಪೂಜಾರ. ಮಂಜುನಾಥ್ ಪವಾರ. ಚನ್ನಪ್ಪ ಪೂಜಾರ. ಮಾಲತೇಶ ಕಟ್ಟಿಮನಿ.ಕುಮಾರ್ ನಾಗಲಾಪುರ .ರಾಜನ ಗೌಡ ಪಾಟೀಲ. ಹನುಮವ್ವ ಗೌರಮ್ಮ. ಚೆನ್ನವ್ವ. ಕವಿತಾ. ಮಂಜುಳಾ. ಶಿಲ್ಪಾ ಹಾಗೂ ನೂರಾರು ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ