ವೈದ್ಯೆಯ ಮೇಲೆ ಅತ್ಯಾಚಾರ ಕೊಲೆ ಖಂಡಿಸಿ ಪ್ರತಿಭಟನೆ
ಬ್ಯಾಡಗಿ,18: ಇತ್ತೀಚೆಗೆ ಕೋಲ್ಕತ್ತಾದ ಆರಿ್ಜ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದ್ದ ಘಟನೆಯನ್ನು ಖಂಡಿಸಿ ಶನಿವಾರ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಪ್ರತಿಭಟನೆ ಮಾಡಿದರು.ಪಟ್ಟಣದಲ್ಲಿನ ಸರ್ಕಾರಿ ಆಸ್ಪತ್ರೆಯ ಎದುರು ಬೆಳಿಗ್ಗೆಯಿಂದ ಪ್ರತಿಭಟನೆಯಲ್ಲಿ ವೈದ್ಯರು ಪಾಲ್ಗೊಂಡಿದ್ದು ಕೂಡಲೇ ಅತ್ಯಾಚಾರ ಎಸಗಿದ ಆರೋಪಿಗಳನ್ನು ಬಂಧಿಸಿ, ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ವೈದ್ಯರಾದ ಡಾ.ಪ್ರಕಾಶ್ ಭಸ್ಮೆ, ಡಾ.ಎಸ್.ಎನ್.ನಿಡಗುಂದಿ,ಡಾ, ವೀರೇಶ್ ಹೊಸಮನಿ,ಡಾ, ಸುರೇಶ ಗುಂಡ್ಪಲ್ಲಿ , ಡಾ, ಚಂದ್ರಕಾಂತ ಮನ್ನಾಪೂರ, ಡಾ, ಹರೀಶ, ಡಾ ನಿಡಗುಂದಿ, ಡಾ, ರಾಹುಲ್, ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರಿದ್ದರು,