ಶಿಗ್ಗಾವ್

ದಿನಬಳಿಕೆಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ದಿನಬಳಿಕೆಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಶಿಗ್ಗಾವಿ  13: ದಿನೇ ದಿನೇ ಪೆಟ್ರೋಲ್ ಡೀಸಲ್ ಹಾಗೂ ದಿನಬಳಿಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆ ಆಗುತ್ತಿದ್ದೆ ಇದನ್ನು ಖಂಡಿಸಿ ತಾಲೂಕಾ ಬ್ಲಾಕ್ ಕಾಂಗ್ರೇಸ ಸಮಿತಿ ವತಿಯಿಂದ ಹಾಗೂ ಮುಖಂಡರು ಕಾರ್ಯಕರ್ತರು ಶನಿವಾರ ಅರಳಿ ಪಂಪ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ಮಾಡಿದರು. 

ಪಟ್ಟಣದ ಅರಳಿ ಪೆಟ್ರೋಲ್ ಪಂಪ್ ಮುಂಬಾಗದಲ್ಲಿ ನಾಟ್ ಓಟ್ 100 ಘೊಷಣೆ ಕೊಗುತ್ತಾ ಜನ ವಿರೋಧಿ ನೀತಿ ದುರಾಡಳಿತ ಮೂಲಕ ಸಾಮಾನ್ಯ ಜನರು ಜೀವನ ಬೀದಿಪಾಲಾಗುಂತೆ ಸರ್ಕಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ 2014 ರ ಪೂರ್ವದಲ್ಲಿ ಲೀಟರ್ ಗೆ ಪೆಟ್ರೋಲ್ ದರ 63 ರೂ ಡೀಸಲ್ ದರ 56 ರೂ ಇತ್ತು ಇಂದು ಪೆಟ್ರೋಲ್ 100 ನಾಟ್ ಓಟ್ ದಾಟಿದೆ ಡೀಸಲ್ 93 ಇದೆ ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ 105 ರಿಂದ 75 ಕ್ಕೆ ಇಳಿಕೆ ಆದರೂ ಸಹ ಇಂಧನ ದರವನ್ನು ಏರಿಕೆ ಮಾಡುವ ಮೂಲಕ ಬಿಜೆಪಿ ಸರ್ಕಾರ ಜನ ಸಾಮನ್ಯರ ಬದುಕಿನ ಜೊತಗೆ ಚಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು. 

ಕೆಪಿಸಿಸಿ ಸದಸ್ಯ ಎಸ್ ಎಸ್ ಶಿವಳ್ಳಿ ಮಾತನಾಡಿ ಪೆಟ್ರೋಲ್ ಡೀಸಲ್ ಅಡುಗೆ ಸಿಲೆಂಡರ್ ವಿದ್ಯುತ್ ದರ ಏರಿಕೆ ಮಾಡಿರುವದನ್ನು  ಖಂಡಿಸಿದರು ಬಿಜೆಪಿ ಅಧಿಕಾರಕ್ಕೆ ಬರುವಾಗ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ  ಬೆಲೆ ಏರಿಕೆ ನಿಯಂತ್ರಣಕ್ಕೆ ತರುತ್ತೇನೆ ಅಂತ ಆಶ್ವಾಸನೆ ನೀಡಿತ್ತು ಆದರೆ ಅದು ಯಾವುದನ್ನು ಬಿಜೆಪಿ ಸರ್ಕಾರ ನೆರವೇರಿಸಿಲ್ಲ ಎಂದು ಸರ್ಕಾರದ ವಿರುಧ್ದ ವಾಗ್ದಾಳಿ ಮಾಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ ಅಧ್ಯಕ್ಷ ಎಂ.ಎಂ.ಹಿರೇಮಠ, ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ, ತಾಲೂಕ ಬ್ಲಾಕ್ ಕಾಂಗ್ರೇಸ ಸಮಿತಿ ಅಧ್ಯಕ್ಷ ಎಂ.ಎನ್‌.ವೇಂಕೋಜಿ, ಕೆಪಿಸಿಸಿ ಎಸ್‌.ಟಿ.ಘಟಕದ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ವಕ್ತಾರ ಮಂಜುನಾಥ ಮಣ್ಣಣ್ಣವರ, ಶಂಭು ಆಜೂರ, ಸಿ.ಎಸ್‌.ಪಾಟೀಲ, ನ್ಯಾಯವಾದಿ ಹನುಮಂತ ಬಂಡಿವಡ್ಡರ, ಶಿವಾನಂದ ಬಾಗೂರ ಸಿದ್ದಪ್ಪ ಮೊರಬದ, ಬಿ.ಸಿ.ಪಾಟೀಲ, ಅನಿಲ ಭದ್ರಾಪುರ, ರಾಜು ಡಾನಗಲ್ ಖಾಜಾಮೈನು ಹುಲಗೂರ, ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ