ಯರಗಟ್ಟಿ

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಯರಗಟ್ಟಿ 14: ಕೇಂದ್ರ ಸರ್ಕಾರ ಪೇಟ್ರೋಲ್ ಬೆಲೆ ಏರಿಕೆ ಖಂಡಿಸಿ ಹಂಡ್ರೇಡ್ ನಾಟೌಟ್ ಎಂದು ಘೋಷಣೆ ಕೂಗುತ್ತಾ ಪಟ್ಟಣದ ಪೆಟ್ರೋಲ್ ಬಂಕ್‌ಗಳ ಮುಂದೆ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. 

ಇದೇ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡ ಉಮೇಶ ಬಾಳಿ ಮಾತನಾಡಿ ಮಾಹಾಮಾರಿ ಕೊರೊನಾ ಹೊಡೆತಕ್ಕೆ ಸಿಲುಕಿ ಜನಸಾಮಾನ್ಯರು ಆದಾಯವಿಲ್ಲದೆ ನಲುಗಿ ಹೋಗಿದ್ದು ಇಂತಹ ಪರಿಸ್ಥಿತಿಯಲ್ಲಿ ಪೆಟ್ರೋಲ್ ಮತ್ತು ಡಿಜೈಲ್ ಬೆಲೆ ಏರಿಸಿರುವ ಕೇದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವುದಾಗಿ ತಿಳಿಸಿದರು. 

ಡಿ.ಡಿ.ಟೋಪೋಜಿ, ರಮೇಶಗೌಡ ದೇವರಡ್ಡಿ, ಅಲ್ತಾಫ ಮುಲ್ಲಾ, ರಫೀಕ್‌.ಡಿ.ಕೆ, ಶಿವಾನಂದ ಕರಿಗೊಣ್ಣವರ, ಸಲೀಂ ಜಮಾದಾರ, ವಿಠ್ಠಲ ಹಾರುಗೊಪ್ಪ, ಮಂಜುನಾಥ ತಡಸಲೂರ, ಫಾರೂಖ ಅತ್ತಾರ ಸೇರಿದಂತೆ ಮುಂತಾದವರಿದ್ದರು. 


ಸುದ್ದಿ ಓದಿ