ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ
ಬನವಾಸಿ 13: ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ನಿರ್ದೇಶನದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್ ಹಾಗೂ ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ,ಎಫ್ ನಾಯ್ಕ್ ಅವರ ಮುಂದಾಳತ್ವದಲ್ಲಿ ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಸಮೀಪದ ದಾಸನಕೊಪ್ಪ ಪೆಟ್ರೋಲ್ ಬಂಕ್ ಎದುರುಗಡೆ 100 ನಾಟ್ ಓಟ್ ಅಭಿಯಾನದ ಅಂಗವಾಗಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಎತ್ತಿನಗಾಡಿಯ ಜೊತೆಗೆ ಕಿಲೋ ಮೀಟರ್ ನಷ್ಟು ದೂರ ಪಾದಯಾತ್ರೆ ಮಾಡುತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತ ವಿಭಿನ್ನವಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು...ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್ ಮಾತನಾಡಿ, ಕಾಂಗ್ರೆಸ್ ಪಕ್ಷವೂ ದೇಶದಲ್ಲಿನ ನಾಗರಿಕನಿಗೆ ಬದುಕುವ ಸಮಾನ ಹಕ್ಕನ್ನು ನೀಡಿ,ಪ್ರತಿಯೊಬ್ಬರಿಗೂ ಜೀವನ ನಡೆಸಲು ಹಲವಾರು ರೀತಿಯಲ್ಲಿ ಸಹಕಾರ ನೀಡುತ್ತಾ ಸುಭದ್ರ ದೇಶವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿತ್ತು.ಆದರೇ ಬಿಜೆಪಿ ಸರ್ಕಾರ ದೇಶವನ್ನು ದಿವಾಳಿಯಂಚಿಗೆ ಕೊಂಡೋಯ್ದು, ಕೊರೊನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ತೈಲ ಬೆಲೆ ಏರಿಕೆ ಮಾಡಿ ದೇಶದ ಆರ್ಥಿಕ ವ್ಯವಸ್ಥೆಯನ್ನು ನೆಲಸಮ ಮಾಡಿವೆ. ಆಡಳಿತದ ನಡೆಸಲು ಎಲ್ಲಾ ರೀತಿಯಲ್ಲೂ ವಿಫಲವಾದ ಜನದ್ರೋಹಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ, ಎಫ್ ನಾಯ್ಕ್ ಮಾತನಾಡಿ ಕಚ್ಚಾ ತೈಲಗಳ ಬೆಲೆ ಹೆಚ್ಚು ಇರುವ ಸಂಧರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಡಿಮೆ ಬೆಲೆಗೆ ಇಂಧನಗಳ ಪೂರೈಕೆಯಾಗುತ್ತಿತ್ತು, ಆದರೆ ಕಚ್ಚಾ ತೈಲಗಳ ಬೆಲೆ ಕಡಿಮೆ ಇರುವ ಸಂಧರ್ಭದಲ್ಲಿ ವಿಪರೀತ ತೆರಿಗೆಯಿಂದ ಬೆಲೆ ಏರಿಕೆಯಾಗಿದೆ.ಇಂಧನ ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಹಲವಾರು ವಸ್ತುಗಳ ಬೆಲೆ ಗಗನಕ್ಕೆರಿವೆ, ಕೊರೊನಾದಂತಹ ಕಠಿಣ ಪರಿಸ್ಥಿತಿಯಲ್ಲಿ ಜನಗಳ ನೆರವಿಗೆ ನಿಲ್ಲಬೇಕಾಗಿದ್ದ ಸರ್ಕಾರಗಳು ಜನರನ್ನ ನರುಳಿಸುವತ್ತ ಹೆಜ್ಜೆ ಹಾಕಿವೆ.ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನದ್ರೋಹಿ ಆಡಳಿತ ಜಗಜ್ಜಾಹೀರಾಗಿದೆ ಎಂದರು.ಈ ಸಂಧರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ನಾಗರಾಜ ನಾರ್ವೇಕರಿ್ಜಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ ಕೆ ಭಾಗವತ್,ಮಾಧ್ಯಮ ವಕ್ತಾರ ದೀಪಕ್ ದೊಡ್ಡುರು,ಜಿ ಪಂ ಸದ್ಯಸ್ಯ ಬಸವರಾಜ್ ದೊಡ್ಮನಿ,ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಲತಾ ಕಾಳೆರಮನೆ,ಬ್ಲಾಕ್ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಸುಧಾಕರ್ ನಾಯ್ಕ್, ಜಿಲ್ಲಾ ಮಹಿಳಾ ಕಾರ್ಯದರ್ಶಿ ಜ್ಯೋತಿ ಪಾಟೀಲ್,ಮೈನಾರಿಟಿ ವಿಭಾಗದ ಕಾರ್ಮೆಲಿನ್,ಬಿ ಶಿವಾಜಿ,ಮೈನಾರಿಟಿ ಬ್ಲಾಕ್ ಅಧ್ಯಕ್ಷ ಅಬ್ದುಲ್ ಕರೀಂ,ಜಿ ವಿ ಹೆಗ್ಡೆ,ಎಸ್ ಜಿ ಭಟ್,ಎಸ್ ಟಿ ಹೆಗ್ಡೆ,ರಾಜು ಗೌಡ್ರು,ಸಿದ್ದನ ಗೌಡ್ರು,ಬಸವರಾಜ್ ನಂದಿಕೆಶ್ವರ್ ಮಠ,ಮಧುಕೆಶ್ವರ ನಾಯ್ಕ್,ರಾಘವೇಂದ್ರ ನಾಯ್ಕ್, ಪುಟ್ಟಪ್ಪ,ಸಿಬಿ ಗೌಡ್ರು,ವಿ ಎಂ ಬೈಂದೂರ್,ಬಸ್ತ್ಯವ್,ಅಶೋಕ್ ನಾಯ್ಕ್,ಗ್ರಾಮ ಪಂಚಾಯತ್ ಸದ್ಯಸ್ಯರಾದ ಸುದರ್ಶನ್ ನಾಯ್ಕ್,ರವಿ ನಾಯ್ಕ್ ಮರಗುಂಡಿ, ಹರೀಶ್ ನಾಯ್ಕ್ ಕಂಟ್ರಾಜಿ ,ನಾಗಪ್ಪ ಯಾಲಕ್ಕಿ,ಭದ್ರ ಗೌಡ್ರು ಹಾಗೂ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು...