ಕಾರ್ಖಾನೆ ವಿಸ್ತರಣೆಗೆ ವಿರೋದಿಸಿ ಕಛೇರಿ ಮುಂದೆ ಪ್ರತಿಭಟನೆ

ಕಾರ್ಖಾನೆ  ವಿಸ್ತರಣೆಗೆ ವಿರೋದಿಸಿ ಕಛೇರಿ ಮುಂದೆ ಪ್ರತಿಭಟನೆ

ಬಳ್ಳಾರಿ 25: ಜಿಲ್ಲೆಯ ಸೊಂಡೂರು ತಾಲೂಕಿನ ತೋರಣಗಲ್ಲಿನ ಬಳಿ ಇರುವ ಎಸ್ಪಿಲಾನ್  ಕಂಪನಿಯ ಕಲ್ಲಿದ್ದಲು ಆಧಾರಿತ ಡಾಂಬರ್ ಕಾರ್ಖಾನೆ ಉತ್ಪಾಧನಾ ಸಾಮರ್ಥ ವಿಸ್ತರಣೆ ಹಾಗೂ ಇಂಗಾಲ ಕಪ್ಪು ಎರಡನೇ ಘಟಕ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ವಿರೋಧಿಸಿ ಇಂದಿರಾನಗರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಛೇರಿಯ ಮುಂದೆ ಡಿಐಎಫ್ಐ ನೇತೃತ್ವದಲ್ಲಿ ಪ್ರತಿಭಟನಾ ದರಣಿ ನಡೆಸಿದರು. 

ಈ ಕುರಿತು ಸಂಘದ ರಾಜ್ಯಧ್ಯಕ್ಷ ಮುನೀರ್ ಕಾಟ್ರಾವಳ್ಳಿ, ಜಿಲ್ಲಾಧ್ಯಕ್ಷ ವಡ್ಡರಹಳ್ಳಿಸ್ವಾಮಿ, ತಾಲೂಕು ಅಧ್ಯಕ್ಷ ಎನ್.ಕಾಲುಬ್ ತಾಳೂರು, ಇವರುಗಳ ನೇತೃತ್ವದಲ್ಲಿ ಪ್ರತಿಭಟನಾ ದರಣಿ ನಡೆಸಿ ಯತವತ್ತಾಗಿ ಕಾಖರ್ಾನೆಯ ಸ್ಥಾಪನೆ ಮತ್ತು ವಿಸ್ತರಣೆಯನ್ನು ವಿರೋಧಿಸಲಾಗುತ್ತದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಯ ಕಾರ್ಯದಶರ್ಿಗೆ ಬರೆದ ವಿವರವಾದ ಮನವಿ ಪತ್ರವನ್ನು ಪರಿಸರ ಅಧಿಕಾರಿ ಮಂಜುನಾಥ ಅವರಿಗೆ ನೀಡಿದರು. 

ಈ ವಿಷಯದಲ್ಲಿ ನಿರ್ಲಕ್ಷದೋರಣೆ ತಾಳಿರುವ ಅಧಿಕಾರಿಗಳ ಮನೋಭಾವದ ವಿರುದ್ದ ಘೋಷಣೆಗಳನ್ನು ಕೂಗಲಾಯಿತು. ಹಾಲಿ ಇರುವ ಕಾಖರ್ಾನೆಗಳಿಂದಲೇ ಈ ಭಾಗದಲ್ಲಿನ ಜನ ವಾಯುವ್ಯಮಾಲಿನ್ಯದಿಂದ ಸಂಕಷ್ಟಕ್ಕೆ ಈಡಾಗಿದ್ದರೆ. ಈಗಿದ್ದರೂ ಸಾಮಾಜಿಕ ಹೊಣೆ ಜವಬ್ಧಾರಿ ಯೋಜನೆ ಮೂಲಕ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದೆ ಎಂದು ಸುಳ್ಳು ವರದಿ ಸಿದ್ದ ಪಡಿಸಿ ಪರಿಸರ ಇಲಾಖೆಗೆ ಕಂಪನಿ ಮೋಸ ಮಾಡುತ್ತಿದೆ. ಈ ಬಗ್ಗೆ ಅರಿತ ಜನತೆ ವಿರೋಧಿಸುತ್ತಿದ್ದರೂ ಜನರ ನೋವಿಗೆ ಸ್ಪಂಧಿಸದೇ ಪರಿಸರ ಮಂಡಳಿಯ ಅಧಿಕಾರಿಗಳು ಭ್ರಷ್ಟರಾಗಿ ಕಾಖರ್ಾನೆಗಳ ಮಾಲಿಕರ ಹೊಲವು ರಕ್ಷಣೆಗೆ ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು. ಈಗಾಗಲೇ ಈ ಕುರಿತು ಕಳೆದ ಜ.28ರಂದು ನಡೆದ ಸಭೆಯಲ್ಲಿ ಜನ ವಿರೋದಿ ಮತ್ತು ತಪ್ಪು ವರದಿಯ ಬಗ್ಗೆ ಸ್ವತಹ ಜಿಲ್ಲಾಧಿಕಾರಿಗಳೇ ಅಸಮದಾನ ವ್ಯೆಕ್ತ ಪಡಿಸಿದ್ದರು. ಈಗ ಬರುವ ಶಿವರಾತ್ರಿ ಆದ ಮರುದಿನ ಮತ್ತು ಈ ಕುರಿತು ಸಭೆ ಕರೆಯಲಾಗಿದೆ. ಇದು ಸರಿಯಲ್ಲ ಎಂದು ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ಇರುವಾಗ ಈ ರೀತಿ ದಿನಾಂಕ ನಿಗದಿಯನ್ನು ಕೈಬಿಡಬೇಕೆಂದು ಆಗ್ರಹಿಸಲಾಯಿತು. ಒಟ್ಟಾರೆ ಕಾಖರ್ಾನೆ ವಿಸ್ತರಣೆಯನ್ನು ಕೈಬಿಡಬೇಕು. ಇಲ್ಲದಿದ್ದರೇ ಮುಂದಿನ ದಿನ ಉಗ್ರಹೋರಾಟದ ತೀವ್ರತೆ ಪಡೆಯಲಿದೆ ಎಂದರು. 

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದಶರ್ಿ ಅರ್ಜುನ್ , ಖಜಾಂಚಿ ಈರಣ್ಣ, ಹೆಚ್.ಲಕ್ಷಣ, ಯು.ತಿಪ್ಪೆಸ್ವಾಮಿ, ಚಂದ್ರಶೇಖರ, ತಿಮ್ಮಪ್ಪ, ಕೃಷ್ಣಾ, ಸೇರಿದಂತೆ ಹಲವಾರು ಗ್ರಾಮದ ಮುಖಂಡರು ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಸುದ್ದಿ ಓದಿ