ಯರಗಟ್ಟಿ

ಕಿರುಕುಳ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ವಿಳಂಬನೆಯ ಪ್ರತಿಭಟನೆ

ಕಿರುಕುಳ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ವಿಳಂಬನೆಯ ಪ್ರತಿಭಟನೆ

ಯರಗಟ್ಟಿ 21: ಅಧಿಕಾರಿಗಳಿಂದಲೇ ಕಿರುಕುಳ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ವಿಳಂಬ ಆಗುತ್ತಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿಯ ಸದಸ್ಯರು ಸಮೀಪದ ಸೊಪ್ಪಡ್ಲ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟಿಸಿದರು. 

ಪ್ರಧಾನ ಮಂತ್ರಿ ಆವಾಸ ಯೋಜನೆ ಪಟ್ಟಿ ಬಿಡುಗಡೆಯಾಗಿದೆ ನಮ್ಮ ಪಂಚಾಯತಗೆ ಯಷ್ಟು ಮನೆಗಳು ಬಂದಿವೆ ಎಂದು ಹಾಗೂ ಕಳೆದ ಆರು ತಿಂಗಳಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೆಲಸಗಳಿಗೆ ಅನುಮತಿ ನೀಡುತ್ತಿಲ್ಲ. ಶಾಲೆಗಳಿಗೆ ಕಂಪೌಂಡ್, ಶೆಡ್, ಕೃಷಿ ಹೊಂಡ, ಕೆರೆ ಅಭಿವೃದ್ಧಿ, ಬಾಂದಾರ ಸೇರಿದಂತೆ ಹಲವು ಕೆಲಸಗಳಿಗೆ ತಡೆ ಹಿಡಿಯಲಾಗಿದೆ. 

ಈ ವಿಷಯವಾಗಿ ಚರ್ಚಿಸಲು ಕಛೇರಿ ಬಂದು ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಲ್ಲಿಸುತ್ತಿದ್ದಿದ್ದಾರೆ ಹೀಗಾದರೆ ಗ್ರಾಮಸ್ಥರಿಗೆ ಏನು ಉತ್ತರ ನೀಡಬೇಕೆಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. 

ಸ್ವಲ್ಪ ಸಮಯದ ನಂತರ ತಾಪಂ ಎಡಿ ರಾಮನಗೌಡ ಆಗಮಿಸಿ, ಕಚೇರಿ ಬೀಗ ತೆಗೆಯಿರಿ. ಒಳಗೆ ಕುಳಿತು ಮಾತನಾಡೋಣ ಎಂದು ಹೇಳಿದರು.  

ಅದಕ್ಕೆ ಒಪ್ಪದ ಸದಸ್ಯರು,  ಪಿಡಿಒ ಅವರನ್ನು ತರಾಟೆಗೆ ತಗೆದು ನಿಮ್ಮಿಂದಲೇ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿಂತಿವೆ. ಸದಸ್ಯರುಗಳ ಕುರಿತು ಹಗುರವಾಗಿ ಮಾತನಾಡಿದ್ದಿರಿ. ಸ್ಥಳಕ್ಕೆ ತಾಪಂ ಇಒ ಬರುವವರೆಗೆ ಬೀಗ ತಗೆಯುವುದಿಲ್ಲ ಎಂದು ಹಠ ಹಿಡಿದು ಕುಳಿತರು. ಸೊಪ್ಪಡ್ಲ ಗ್ರಾಮ ಪಂಚಾಯಿತಿಗೆ ಆಗಮಿಸಿದ ತಾಪಂ ಇಒ ಇಓ ಆನಂದ ಬಡಕುಂದ್ರಿ  ನೆಲದ ಮೇಲೆ ಕುಳಿತಿದ್ದ ಸದಸ್ಯರ ಕೈ ಹಿಡಿದು ಒಳಗೆ ಕುಳಿತು ಮಾತನಾಡೋಣ ಬನ್ನಿ ಎಂದು ವಿನಂತಿಸಿದರು.  

ಆದರೆ ಸದಸ್ಯರು ಅದಕ್ಕೆ ಒಪ್ಪದೆ ಇಲ್ಲಿಯೇ ಮಾತನಾಡಿ ಎಂದು ಹಠ ಹಿಡಿದರು. ಕೆಣಟಿಜಜಜಿಟಿಜಜನೆಗೆ ಇಒ ಅವರೇ ಸದಸ್ಯರುಗಳ ಜತೆಗೆ ಕುಳಿತರು.  

ಯಾವ ಕಾರಣಕ್ಕೆ ಕಾಮಗಾರಿ ತಡೆ ಹಿಡಿಯಲಾಗಿದೆ ಎಂದು ಸದಸ್ಯರು, ಇಒ ಅವರನ್ನು ಪ್ರಶ್ನಿಸಿದರು. ಇಒ ಆನಂದ ಬಡಕುಂದ್ರಿ ಮಾತನಾಡಿ, ಕಾಮಗಾರಿ ಶೀಘ್ರ ಆರಂಭಿಸುವುದರ ಜತೆಗೆ ಪಿಡಿಒ ಅವರನ್ನು ಬದಲಾಯಿಸುವುದಾಗಿ ಭರವಸೆ ನೀಡಿದರು. 

ಈ ವೇಳೆ  ಗ್ರಾ. ಪಂ. ಅಧ್ಯಕ್ಷೆ ಸತ್ಯವ್ವ ಗೊರಗುದ್ದಿ, ಸದಸ್ಯರಾದ ಕಿರಣ ಹುಣಶ್ಯಾಳ, ರವಿಕಿರಣ ಪಾಟೀಲ, ಮಹಾದೇವಿ ಕೊಡ್ಲಿವಾಡ, ಸುವರ್ಣ  ಹೊಸಮಠ, ಸುನೀತಾ ಕಾಡಮಠ, ಸ್ಥಳೀಯರಾದ ಮಹಾದೇವ ಯಡ್ರಾವಿ, ಆನಂದ ಬಾಗೋಡಿ, ಹಣಮಂತ ದುರಗನ್ನವರ, ಮಹಾದೇವ ತಳವಾರ, ಸೋಹಿಲ ನಧಾಫ, ಪ್ರವೀಣ ಗಲಗಲಿ, ಮಿಥುನ ಗೌಡರ, ಹಾಗೂ ಗ್ರಾಮದ ಯುವಕರು ಮತ್ತು ಸಾರ್ವಜನಿಕರು ಮತ್ತಿತರಿದ್ದರು. 


ಸುದ್ದಿ ಓದಿ