ಕೇಂದ್ರ ಸರಕಾರದ ಇಡೀ ದುರ್ಬಳಕೆ ಪ್ರಜಾಪ್ರಭುತ್ವ, ಸಂವಿಧಾನ ನೀತಿ ಖಂಡಿಸಿ ಪ್ರತಿಭಟನೆ
ಇಂಡಿ: ಕೇಂದ್ರ ಸರಕಾರದ ಇಡೀ ದುರ್ಬಳಕೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನೀತಿಯನ್ನು ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಇಂಡಿ ಮತ್ತು ಬಳ್ಳೊಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಮಂಗಳವಾರ ಜರಗಿತು.
ಪ್ರತಿಭಟನೆಯು ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ವಿವಿಧ ವೃತ್ತಗಳ ಮೂಲಕ ಹಾದು ಬಸವೇಶ್ವರ ವೃತ್ತಕ್ಕೆ ಆಗಮಿಸಿ ಕೆಲ ಕಾಲ ಕೇಂದ್ರ ಸರಕಾರದ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಆಗ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರುತ್ತಿರುವುದನ್ನು ಮನಗಂಡ ಪೊಲೀಸರು. ಅಹಿತರಕರ ಘಟನೆ ಜರುಗದಂತೆ ಮುಂಜಾಗೃತ ಕ್ರಮವಾಗಿ ಪ್ರತಿಭಟನಾಕಾರನ್ನು ಕೆಲ ಕಾಲ ತಮ್ಮ ವಶಕ್ಕೆ ಪಡೆದುಕೊಂಡು ನಿಯಂತ್ರಣ ಮಾಡಿ ನಂತರ ಬಿಡುಗಡೆಗೊಳಿಸಿದರು.
ಪ್ರತಿಭಟನೆಯಲ್ಲಿ ಎಪಿಎಮ್ಸಿ ಮಾಜಿ ಅಧ್ಯಕ್ಷ ಭೀಮಣ್ಣ ಕವಲಗಿ, ಕೆಪಿಸಿಸಿ ಸದಸ್ಯ ಮಲ್ಲಣಗೌಡ ಪಾಟೀಲ, ಇಂಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಇಲಿಯಾಸ ಬೋರಾಮಣಿ, ಅಣ್ಣಪ್ಪ ಬಿದರಕೊಟಿ, ರಶಿದ ಅರಬ, ಪಂಚು ಅರವತ್ತು, ಜಾವಿದ ಮೋಮಿನ, ಶೇಖರ ನಾಯಕ, ಮುತ್ತಪ್ಪ ಪೊತೆ, ಮಹಿಬುಬ ಅರಬ, ಪ್ರಶಾಂತ ಕಾಳೆ, ಮಹೇಶ ಹೊನ್ನಬಿಂದಗಿ, ನಿರ್ಮಲಾ ತಳಕೇರಿ, ಮಹಿಬುಬು ಜಾಗಿರದಾರ, ಭೀಮಾಶಂಕರ ಮೊರಮನ, ಉಸ್ಮಾನಗಣಿ ಶೇಖ, ಜಬ್ಬಾರ ಅರಬ, ಸತೀಶ ಕುಂಬಾರ, ಯಮುನಾಜಿ ಸಾಳುಂಕೆ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.