ತಹಶೀಲ್ದಾರ್ ವಿರುದ್ಧ ಕನ್ನಡಪರ ಸಂಘಟನೆಗಳ ಪ್ರತಿಭಟನೆ
ಶಿಗ್ಗಾವಿ ನವೆಂಬರ್ 04: ತಾಲೂಕಿನ ವಿವಿಧ ಕನ್ನಡ ಪರ ಹೋರಾಟಗಾರರನ್ನು ಪೂರ್ವಭಾವಿ ಸಭೆಗೆ ಮತ್ತು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕಡೆಗಣಸಿದ್ದಾರೆ ಎಂದು ಕನ್ನಡಪರ ಹೋರಾಟಗಾರರು ತಾಲೂಕಾ ಆಡಳಿತ ಹಾಗೂ ತಹಶೀಲ್ದಾರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಕೆಲಕಾಲ ತಹಶೀಲ್ದಾರರ ಕಾರ್ಯಲಯದ ಎದುರಿಗೆ ಪ್ರತಿಭಟನೆ ಮಾಡಿದರು.
ಕನ್ನಡ ಪರಹೋರಾಟಗಾರರ ಮುಖಂಡರಾದ ಸಂತೋಷ ಪಾಟೀಲ, ಹನುಮಂತ ಬಂಡಿವಡ್ಡರ, ಬಸಲಿಂಗಪ್ಪ ನರಗುಂದ, ಬಸಲಿಂಗಪ್ಪ ಮಲ್ಲೂರ, ಮಂಜುನಾಥ ಮಣ್ಣಣ್ಣವರ, ಈರಣ್ಣ ಸಮಗೊಂಡ, ಶೋಭಾ ಗಂಜಿಗಟ್ಟಿ, ಸಂಜೀವ ಮಣ್ಣಣ್ಣವರ ಸೇರಿದಂತೆ ಕಾರ್ಯಕರ್ತರು ಇದ್ದರು.