ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಪ್ರತಿಭಟನೆ, ಮನವಿ
ರಾಣೆಬೆನ್ನೂರು: ತಾಲೂಕಿನ ಕೋಟಿಹಾಳ ಗ್ರಾಮವು ಅಪಾರ ಜನ ವಾಸಿಗಳಾಗಿರುವ ಬಹುದೊಡ್ಡ ಗ್ರಾಮವಾಗಿದೆ, ಆದರೆ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ, ಈ ಕೂಡಲೇ ತಾಲೂಕ ಆಡಳಿತವು, ಗ್ರಾಮಕ್ಕೆ ಅಗತ್ಯವಿರುವ ಮೂಲಭೂತ ಸವಲತ್ತುಗಳನ್ನು ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ, ನೂರಾರು ಕಾರ್ಯಕರ್ತರು ಮತ್ತು ಗ್ರಾಮಸ್ಥರು, ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ತಹಸೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ತಮ್ಮ ಮನವಿ ಸಲ್ಲಿಸಿದರು. ಮುಂಚೂಣಿಯಲ್ಲಿ, ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ್, ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೊಟ್ರೇಶಪ್ಪ ಎಮ್ಮಿ, ಪ್ರಧಾನ ಕಾರ್ಯದರ್ಶಿ ಸಿದ್ದಾರೋಡ ಗುರುಮ್, ಸೇರಿದಂತೆ ಸಂಘಟನೆಯ ಇತರೇ ಪದಾಧಿಕಾರಿಗಳು, ಗ್ರಾಮ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು, ಮತ್ತು ಪಂಚಾಯಿತಿ ಉಪಾಧ್ಯಕ್ಷ ಶೀಲಾ ಎಸ್ ಹರಿಹರ, ಸಿದ್ದಪ್ಪ ಮಾಗೋಡ್, ಶ್ರೀನಿವಾಸ ರಾಜನಹಳ್ಳಿ, ಸಿದ್ದಪ್ಪ ಬಾರ್ಕಿ, ರವಿ ಕೋರೆ, ಪರಶುರಾಮ್ ಲಕ್ಕೊಳ್ಳಿ, ಬಾಲಕೃಷ್ಣ ಹತ್ತೂರ್, ರಾಜಪ್ಪ ಕೋರೆ, ಮತ್ತಿತರರು ಪಾಲ್ಗೊಂಡಿದ್ದರು.