ಯರಗಟ್ಟಿ

ಪರಿಸರದ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ: ನ್ಯಾ. ಸಿದ್ದಾರಾಮ ರೆಡ್ಡಿ

ಪರಿಸರದ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ: ನ್ಯಾ. ಸಿದ್ದಾರಾಮ ರೆಡ್ಡಿ

ಯರಗಟ್ಟಿ 06: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಅರಣ್ಯ ಇಲಾಖೆ, ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದಿಂದ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರಧಾನ ದಿವಾಣಿ ನ್ಯಾಯಾಧೀಶ ಸಿದ್ದಾರಾಮ ರೆಡ್ಡಿ ಅವರು ಸಸಿಗೆ ನೀರುಣಿಸಿ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ಪರಿಸರದ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ. ಆದರೆ ಮನುಷ್ಯ ತನ್ನ ದುರಾಸೆಯಿಂದ ಪರಿಸರವನ್ನು ಅವನತಿಗೆ ದೂಡುತ್ತಿದ್ದಾನೆ. ಇದರಿಂದ ಪ್ರಾಣಿ, ಪಕ್ಷಿಗಳೂ ಅವಸಾನದತ್ತ ಸಾಗಿವೆ. ಜನರಲ್ಲಿ ಪರಿಸರದ ಮಹತ್ವ ಮತ್ತು ಅದನ್ನು ಸಂರಕ್ಷಿಸುವ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. 

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್‌. ಆರ್‌. ರೆಬ್ಬನ್ನವರ, ಸರಕಾರಿ ಅಭಿಯೋಜಕರು ಸಚೀನ ಅಂಗಡಿ, ಉಪಾಧ್ಯಕ್ಷ ವ್ಹಿ. ಬಿ. ಹೊಸಮನಿ, ಉಪವಲಯ ಅರಣ್ಯಾಧಿಕಾರಿಗಳಾ ಆರ್‌. ಕೆ. ಪೂಜೇರ, ಶೋಭಾ ಆಲದಕಟ್ಟಿ, ಸಿದ್ದಪ್ಪ ನಾಯ್ಕ, ಡಿ. ಎಂ. ಅರ್ಟಗಲ್, ನ್ಯಾಯವಾದಿಗಳಾದ ಆರ್‌. ಎಸ್‌. ಆಲದಕಟ್ಟಿ, ಎಂ. ಎಂ. ಮಡಿವಾಳರ, ವ್ಹಿ. ಜಿ. ಬಿರಾದಾರಪಾಟೀಲ, ದೀಲೀಪ ಜಮಾದರ, ಹಾಗೂ ಪ್ರಮುಖರು ಇದ್ದರು. 


ಸುದ್ದಿ ಓದಿ