ಪರಿಸರ ಕಪಾಡುವುದು ನಮ್ಮೆಲ್ಲರ ಆದ್ಯ ಕತೃವ್ಯ: ಹಿರೇಮಠ
ಸಿಂದಗಿ; ಒಂದು ಸಸಿಯನ್ನು ನೆಟ್ಟರೆ ಕನಿಷ್ಟ ಅದು ಇನ್ನೂರು ಜನರಿಗೆ ಆಮ್ಲಜನಕ ಕೊಡುತ್ತದೆ. ಹೀಗಿಯೇ ನೂರಾರು, ಸಾವಿರಾರು ನೆಡುವುದರಿಂದ ಮುಂದಿನ ದಿನಮಾನಗಳಲ್ಲಿ ಪ್ರಪಂಚಕ್ಕೆ ಆಮ್ಲಜನಕ ನೀಗುತ್ತದೆ. ಆಮ್ಲಜನಕದ ಕೊರತೆಯಿಂದ ಎಷ್ಟೋ ಜನರು ಅಸುನಿಗಿದ ಘಟನೆ ಮರೆತ್ತಿಲ್ಲ ಕಾರಣ ಎಲ್ಲರೂ ಪರಿಸರ ಕಪಾಡುವುದು ನಮ್ಮೆಲ್ಲರ ಆಧ್ಯ ಕತೃವ್ಯವಾಗಿದೆ ಎಂದು ವಿರುಪಾಕ್ಷಯ್ಯ ಶಾಸ್ತ್ರಿಗಳು ಹಿರೇಮಠ ಹೇಳಿದರು.
ತಾಲೂಕಿನ ಚಟ್ಟರಕಿ ಗ್ರಾಮದ ಎಸ್ ಬಿ ದೇವರೆಡ್ಡಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಹಚ್ಯಾಳ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಿದ್ಧಾರೂಢ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಜಾಧಿಕಾ ಅಮೃತ ಮಹೋತ್ಸವ ನಿಮಿತ್ಯವಾಗಿ ಶಾಲಾ ಆವರಣದಲಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಇಂಥ ಶಿಕ್ಷಣ ಸಂಸ್ಥೆಗಳಿಗೆ ಪರಿಸರ ಪ್ರೇಮಿಗಳಿಂದ ಗಿಡಗಳನ್ನು ದನೀಡುವುದರ ಮೂಲಕ ಮಕ್ಕಳಿಗೆ ಸ್ವಚ್ಛ ಶುದ್ಧವಾದ ವಾತಾವರಣ ಕಲ್ಪಿಸಲು ಅವಕಾಶ ಮಾಡಿಕೊಟ್ಟಿದ್ದು ಶ್ಲಾಘನೀಯ ಎಂದರು
ಶಾಲಾ ಆವರಣದಲ್ಲಿ ಬೇಕಾಗುವ ಸುಮಾರು 400 ಸಸಿಗಳನ್ನು ದೇಣಿಗೆಯಾಗಿ ನೀಡಿದ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶರಣಪ್ಪ ಶಿರಶ್ಯಾಡ ಅವರು ಮಾತನಾಡಿ, ಪರಿಸರವನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ನಿಸರ್ಗವೇ ದೊಡ್ಡ ವೈದ್ಯ. ನಿಸರ್ಗವನ್ನು ನಾವು ಬೆಳೆಸಿದರೆ ನಮ್ಮನ್ನು ಜೀವನಪೂರ್ತಿ ಅದು ನಮ್ಮನ್ನು ಉಳಿಸುತ್ತದೆ. ಆಮ್ಲಜನಕದ ಕೊರತೆಯಿಂದ ಕೋವಿಡ್ ನಂತಹ ಮಾಹಾಮಾರಿಗಳು ನಮ್ಮನ್ನು ಆಳುತ್ತಿವೆ. ಒಬ್ಬರ ಮುಖ ಒಬ್ಬರು ನೋಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಭಂಧಗಳು ದೂರಾಗಿವೆ. ಈ ಎಲ್ಲ ಸಮಸ್ಯೆಗಳಿಗೆ ಪರಿಸರ, ಕಾಡು ಬೆಳೆಸುವುದೊಂದೆ ಪರಿಹಾರ ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹನುಮಂತ ದೇವರಡ್ಡಿ ಹಾಗೂ ಉಪಾಧ್ಯಕ್ಷ ಮಾನಪ್ಪ ದೇವರೆಡ್ಡಿ ನಿರ್ದೇಶಕರಾದ ರಾಜಶೇಖರ್ ಪಾಟೀಲ್, ಸಿದ್ದನ ಬಡಿಗೇರ್ ಊರಿನ ಪ್ರಮುಖರಾದ ಶಿವಪ್ಪ ಚೂರಿ, ಮುದುಕಪ್ಪ ವಡವಡಗಿ ಹಾಗೂ ಶಾಂತಗೌಡ ಆಸ್ಕಿ, ಬಿಮನಗೌಡ ಬೋರಗಿ, ಚಿದಾನಂದ ಆಸ್ಕಿ, ಪವಾಡಪ್ಪ ಹಡಪದ ಉಪಸ್ಥಿತರಿದ್ದರು.
ಸಂಗರೆಡ್ಡಿ ಬೋರಗಿ ನಿರೂಪಿಸಿದರು ಅರವಿಂದ ಬಡಿಗೇರ್ ವಂದಿಸಿದರು