ಸಿಂಧಗಿ

ಹಜರತ್ ಮೊಹಮ್ಮದ ಪೈಗಂಬರ್ ಜನ್ಮ ದಿನಾಚರಣೆ

ಹಜರತ್ ಮೊಹಮ್ಮದ ಪೈಗಂಬರ್ ಜನ್ಮ ದಿನಾಚರಣೆ

ಸಿಂದಗಿ12: ಹಜರತ್ ಮೊಹಮ್ಮದ ಪೈಗಂಬರ್‌ರು ಮಾನವನಿಗೆ ಕೇವಲ ಹಕ್ಕುಗಳನ್ನು ಮಾತ್ರ ಹೇಳಿಕೊಟ್ಟಿಲ್ಲ, ಬದಲಾಗಿ ಮಾನವನ ಕರ್ತವ್ಯಗಳನ್ನೂ ನೆನಪಿಸಿದ್ದರು. ನಿಮ್ಮಲ್ಲಿ ಪ್ರತಿಯೊಬ್ಬರೂ ಹೊಣೆಗಾರರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಹೇಳಿದರು. 

                ನಗರದ ವಿದ್ಯಾನಗರ ವಾರ್ಡ್‌ ನಂ.2ರಲ್ಲಿ ಹಜರತ್ ಮೊಹಮ್ಮದ ಪೈಗಂಬರ್ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಜವಾಬ್ದಾರಿಕೆಯ ಕುರಿತು ಪ್ರತಿಯೊಬ್ಬನೂ ಪ್ರಶ್ನಿಸಲ್ಪಡುತ್ತಾನೆ. ಸಮಾಜದಲ್ಲಿ ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಾನೆ. ಒಂದು ವೇಳೆ ಆತನು ತನ್ನ ಜವಾಬ್ದಾರಿಯನ್ನು ಅರಿತು ನಿರ್ವಹಿಸುತ್ತಾನೆ ಎಂದಾದರೆ ನಿಜವಾಗಿ ಆತನೂ ಯಶಸ್ವಿಯಾಗುತ್ತಾನೆ ಎಂದು ಹೇಳಿದರು. 

          ಮೌಲಾನಾ ಹಫೀಜ್ ಅಕ್ಬರ್ ಭಗವಾನ, ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ, ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ, ಸೈಪನ್ ನಾಟಿಕಾರ, ಮೈಬೂಬ್ ಸಿಂದಗಿಕರ, ಶೇಖಪ್ಪಗೌಡ ಬ್ಯಾಕೋಡ, ತಿರುಪತಿ ಬಂಡಿವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  


ಸುದ್ದಿ ಓದಿ