ಶಿಗ್ಗಾವ್

ಸರಕಾರದ ಕೋವಿಡ್ ದ್ವಂದ್ವ ನಿಯಮದಿಂದ ಜನ ಆಸ್ಪತ್ರೆಗೆ ಅಲೆದಾಡಿ ಬೇಸತ್ತಿದ್ದಾರೆ: ದುಂಡಿಗೌಡ್ರ

ಸರಕಾರದ ಕೋವಿಡ್ ದ್ವಂದ್ವ ನಿಯಮದಿಂದ ಜನ ಆಸ್ಪತ್ರೆಗೆ ಅಲೆದಾಡಿ ಬೇಸತ್ತಿದ್ದಾರೆ: ದುಂಡಿಗೌಡ್ರ

ಶಿಗ್ಗಾವಿ ೧೯: ರಾಜ್ಯ ಸರಕಾರದ ಕೋವಿಡ್ ದ್ವಂದ ನಿಯಮ ಹಾಗೂ ಹೇಳಿಕೆಯಿಂದ ಜನಸಾಮಾನ್ಯರು ಆಸ್ಪತ್ರೆಗೆ ಅಲೆದಾಡಿ ಬೇಸತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶ್ರೀಕಾಂತ ದುಂಡಿಗೌಡ್ರ ಹೇಳಿದರು. 

ತಾಲ್ಲೂಕಿನ ಹೊಸುರ ಗ್ರಾಮದಲ್ಲಿ ರವಿವಾರ ನಡೆದ ಪ್ರಾಜೇಕ್ಟ್‌ ಪ್ರಜಾ ಪ್ರತಿನಿಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕೋವಿಡ್‌ದಿಂದ ಮೃತರ ಕುಟುಂಬಕ್ಕೆ 1 ಲಕ್ಷ ಪರಿಹಾರ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಜನ ಸಾಮಾನ್ಯರು ಕೋವಿಡ್ ಮರಣ ವರದಿ ತರಲು ಹೋದರೆ ಅವರು ಕೋವಿಡನಿಂದ ಮರಣ ಹೊಂದಿಲ್ಲ ಕೋವಿಡ ಲಕ್ಷಣಗಳಿಂದ ಮರಣ ಹೊಂದಿದ್ದಾರೆಂದು ಹಾಗೂ ಅಂತ್ಯ ಸಂಸ್ಕಾರವನ್ನು ಕೋವಿಡ ನಿಯಮಾವಳಿಯಂತೆ ಮಾಡಿದ್ದು ಕೇಳಿದರೆ ಕೋವಿಡ ಲಕ್ಷಣವಿರುವ ಕಾರಣ ಮಾಡಲಾಗಿದೆ ಪ್ರಮಾಣಪತ್ರ ಕೇಳಿದರೆ ಕೋವಿಡ ನೆಗೆಟಿವ್ಹ ಪ್ರಮಾಣಪತ್ರ ನೀಡಿ ಇಬ್ಬಗೆ ನೀತಿಯನ್ನು ಅನುಸರಿಸುತ್ತಿದೆ ಮುಂದಿನ ದಿನಗಳಲ್ಲಿ  ಕೋವಿಡನಿಂದ ಮರಣ ಹೊಂದಿದವರ ಸೌಲಭ್ಯ ದೊರಕುವವರೆಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 

ರಾಜ್ಯದಲ್ಲಿ ಕೋವಿಡ ಕರ್ಫ್ಯೂ  ಸಮಯದಲ್ಲಿ ಕರ್ನಾಟಕ ಸರಕಾರ ಕೆಲವೊಂದು ಸಮಾಜದ ಬಡ ಕುಟುಂಬ ಸದಸ್ಯರಿಗೆ 2 ಸಾವಿರ ಪರಿಹಾರ ಧನ ನೀಡಿ ಇನ್ನೂ ಕೆಲವು ಸಮಾಜದ ಬಡ ಕುಟುಂಬಗಳಿಗೆ ಪರಿಹಾರ ಧನ ನೀಡದೇ ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಿದ್ದಾರೆ ಮತ್ತು ಕಾರ್ಮಿಕರಿಗೆ 3 ಸಾವಿರ ಬದಲು 10 ಸಾವಿರ ಪರಿಹಾರ ಧನ ನೀಡಬಹುದಿತ್ತು ಎಂದರು. 

ಮಾಜಿ ವಿ.ಪ.ಸದಸ್ಯ ಸೋಮಣ್ಣಾ ಬೇವಿನಮರದ, ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಸದಸ್ಯೆ ರಾಜೇಶ್ವರಿ ಪಾಟೀಲ, ನ್ಯಾಯವಾದಿ ಲಕ್ಕಣ್ಣವರ, ಮುಖಂಡ ಹನುಮರೆಡ್ಡಿ ನಡುವಿನಮನಿ ಮಾತನಾಡಿದರು. 

ತಾಲೂಕ ಕಾಂಗ್ರೆಸ್‌್‌ ಅಧ್ಯಕ್ಷ ಎಂ.ಎನ್‌.ವೇಂಕೋಜಿ ಅಧ್ಯಕ್ಷತೆಯಲ್ಲಿ, ಮಹಿಳಾ ಕಾಂಗ್ರೇಸ ಜಿಲ್ಲಾಧ್ಯಕ್ಷೆ ಪ್ರೇಮಾ ಪಾಟೀಲ, ಹೊಸುರ ಗ್ರಾಮ ಪಂಚಾಯತ ಅಧ್ಯಕ್ಷ ಅಣ್ಣಪ್ಪ ಲಮಾಣಿ, ಕೆ.ಪಿ.ಸಿ.ಸಿ ಎಸ್‌.ಟಿ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಮುಖಂಡರಾದ ಕೇದಾರ​‍್ಪ ಬಗಾಡೆ,  ಶ್ರೀಕಾಂತ ಪೂಜಾರ, ಸಿ.ಎಸ್‌.ಪಾಟೀಲ, ಶಿವಾನಂದ ಬಾಗೂರ, ಸಿದ್ದಣ್ಣಾ ಮೊರಬದ,  ಗುರುನಗೌಡ್ರ ಪಾಟೀಲ, ಕಿರಣಗೌಡ್ರ ಪಾಟೀಲ, ಎಸ್‌.ಎಫ್‌.ಮಣಕಟ್ಟಿ, ಈಸೂಫ್‌ಸಾಬ ಬಾವಿಕಟ್ಟಿ ,ನ್ಯಾಯವಾದಿ ಬಸವರಾಜ ರಾಗಿ, ಈರನಗೌಡ ದೊಡ್ಡಗೌಡ್ರ, ಬಿ.ಸಿ.ಪಾಟೀಲ ಇದ್ದರು. 


ಸುದ್ದಿ ಓದಿ