ರಾಣೆಬೆನ್ನೂರ

ರೈತ ಉತ್ಪಾದಕ ಕಂಪನಿಗಳ ಪ್ರಗತಿ ಪರೀಶೀಲನಾ ಸಭೆ

ರೈತ ಉತ್ಪಾದಕ ಕಂಪನಿಗಳ ಪ್ರಗತಿ ಪರೀಶೀಲನಾ ಸಭೆ

ರಾಣಿಬೆನ್ನೂರು 24: ತಾಲೂಕಿನ ಉಪನಿರ್ದೇಶಕರ ಕಛೇರಿಯಲ್ಲಿ ದಿ.21ರಂದು ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಸ್ಕೊಡ್‌ವೆಸ್  ಸಂಸ್ಥೆಯ ಸಹಯೋಗದಲ್ಲಿ ಹಿರೇಕೆರೂರು, ರಾಣಿಬೆನ್ನೂರು ತಾಲೂಕಿನ ರೈತಉತ್ಪಾದಕ ಕಂಪನಿಗಳ ಪ್ರಗತಿ ಪರೀಶೀಲನಾ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಂಟಿ ಕೃಷಿ ನಿರ್ದೇಶಕಕರಾದ ಮಂಜುನಾಥ್ ಬಿ.ಇವರುಉದ್ಘಾಟಿಸಿ ಮಾತನಾಡಿದ ಇವರು ರೈತ ಉತ್ಪಾದಕ ಕಂಪನಿಗಳ ರಚನೆ, ಮಹತ್ವ ಹಾಗೂ ವ್ಯವಹಾರಿಕ ಯೋಜನೆಗಳ ಬಗ್ಗೆ ವಿಸ್ತ್ರತವಾಗಿ ವಿವರಿಸುತ್ತಾ ಷೇರು ಸಂಗ್ರಹಣೆಯನ್ನು ಸಂಗ್ರಹಿಸಿ ರೈತರಿಗೆಅವಶ್ಯವಿರುವ ಅನೂಕೂಲತೆಗಳನ್ನು ಒದಗಿಸಿ ಕಂಪನಿಯನ್ನು ಅಭಿವೃದ್ಧಿಗೊಳಿಸಬೇಕು. ಹಾಗೂ ಸರ್ಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ಎಫ್‌.ಪಿ.ಒ.ಗಳ ಮೂಲಕ ರೈತರಿಗೆ ಒದಗಿಸುವುದಾಗಿತಿಳಿಸಿದರು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ.ಜಿ.ಎಸ್ ಸ್ಪೂರ್ತಿ ಉಪನಿರ್ದೇಶಕರು-2 ರಾಣಿಬೆನ್ನೂರು ಮಾತನಾಡಿದ ಇವರು ಕಂಪನಿಗಳ ವ್ಯವಹಾರಿಕ ಸ್ಥಿತಿಗತಿಗಳನ್ನು ವಿವರಿಸುತ್ತಾ ಕಂಪನಿಗಳಲ್ಲಿ ಷೇರುಗಳನ್ನು ಹೆಚ್ಚಿಸಿಕೊಳ್ಳುತ್ತಾ ವ್ಯವಹಾರಯೋಜನೆ ಮಾಡಿಕೊಂಡು ಮೌಲ್ಯವರ್ಧನೆ ಮಾಡಿಕೊಳ್ಳಬೇಕು. ಇದರಿಂದವ್ಯಾಪಾರ ವಹಿವಾಟು ಮಾಡಲು ಸಹಕಾರಿಯಾಗುತ್ತದೆ, ಇದಕ್ಕೆ ಕೃಷಿ ಇಲಾಖೆಯ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು. 

ಸಭೆಯಲ್ಲಿ ರಾಣಿಬೆನ್ನೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಎಚ್‌. ಪಿ .ಗೌಡಪ್ಪನವರ್, ಹಿರೇಕೆರೂರು ತಾಲೂಕಿನ ಸಹಾಯಕ  ಕೃಷಿ ನಿರ್ದೇಶಕ ಎಸ್‌.ಎನ್‌. ಮಂಜುನಾಥ್, ಕಂಪನಿಯ ನಿರ್ದೇಶಕರು ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ