ಸ್ಮಾರ್ಟ ಬೋರ್ಡಗಳ ವಿತರಣಾ ಸಮಾರಂಭಕ್ಕೆ ಚಾಲನೆ
ಚಿಕ್ಕೋಡಿ 19: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿರುವ ಕಬ್ಬೂರು ಪಟ್ಟಣದ ಉಮಿ ಮಹೇಶ ಬೆಲ್ಲದ ಕಾರ್ಯ ಶ್ಲಾಘನೀಯವಾಗಿದೆ. 25 ಸರಕಾರಿ ಶಾಲೆಗಳಿಗೆ 65 ಇಂಚಿನ ಸ್ಮಾರ್ಟ ಬೋರ್ಡ ನೀಡುವ ಮೂಲಕ ಸರಕಾರಿ ಶಾಲೆಯ ಮಕ್ಕಳು ಗುಣಮಟ್ಟ ಶಿಕ್ಷಣ ಪಡೆಯಬೇಕು ಎಂದು ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಕಬ್ಬೂರ ಪಟ್ಟಣದ ಬಿ.ಜಿ.ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ವತಿಯಿಂದ 25 ಸರಕಾರಿ ಶಾಲೆಗಳಿಎ65 ಇಂಚಿನ ಸ್ಮಾರ್ಟ ಬೋರ್ಡ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ದೇಶದಲ್ಲಿ ಶಿಕ್ಷಣ ಸಂಸ್ಥೆಗಳು ಬೆಳವಣಿಗೆ ಕಂಡಿರುವುದು ದಾನಿಗಳಿಂದ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಜನರಿಗೆ ಶಿಕ್ಷಣದಿಂದ ವಂಚಿತರಾಗಿದ್ದರು ಮಹಾದಾನಿಗಳಿಂದ ಫಲವಾಗಿ ನಮ್ಮ ದೇಶದಲ್ಲಿ ಎಲ್ಲರಿಗೂ ಶಿಕ್ಷಣ ಸಿಗುವಂತಾಗಿದೆ. ಹಲವಾರು ಜನರು ಶಿಕ್ಷಣಕ್ಕಾಗಿ ತಮ್ಮ ಜಮೀನು ನಿಡಿದ್ದಾರೆ. ಶಿಕ್ಷಣ ಎನ್ನುವುದು ಈಗ ವ್ಯಾಪಾರ ಆಗಿದೆ ಎನ್ನುವುದು ಗೌಪ್ಯ ವಿಚಾರವೇನೂ ಅಲ್ಲ. ಲಕ್ಷ ಲಕ್ಷ ಹಣ ನೀಡಿ ಪೋಷಕರ ಜೇಬು ಖಾಲಿ ಮಾಡ್ತಿವೆ. ಆದರೆ ಬೆಂಗಳೂರು ಅಂತಹ ಪಟ್ಟಣದಲ್ಲಿ ಇರುವಂತಹ ಸೌಲಭ್ಯಗಳು ಹಳ್ಳಿಗಳಲ್ಲಿ ಕಲ್ಪಿಸಿರು ಮಹೇಶ ಬೆಲ್ಲದ ಅವರ ಕಾರ್ಯ ಮುಂದುವರೆಯಲಿ ಎಂದರು.
ಉದ್ಯಮಿ ಮಹೇಶ ಬೆಲ್ಲದರ ತನ್ನದೇ ಸಿಬಿಎಸ್ಸಿ ಶಾಲೆ ಇದ್ದರೂ ಸಹ ತನ್ನ ಅಕ್ಕ ಪಕ್ಕದ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಸೌಲಭ್ಯಗಳು ಸಿಗಬೇಕು ಎನ್ನುವ ಉದ್ದೇಶದಿಂದ 25 ಸ್ಮಾರ್ಟ್ ಬೋರ್ಡ್ ನೀಡಿ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಕೈ ಜೋಡಿಸಿದ್ದಾರೆ. ಅದು ಅಲ್ಲದೆ ಕಳೆದ 20 ವರ್ಷಗಳಿಂದ ಸರಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳಿಗೆ ಬೇಕಾಗುವಂತಹ ಸಾಮಗ್ರಿಗಳನ್ನು ನಿಡುತ್ತ ಬಂದ ಅವರ ಕಾರ್ಯ ಶ್ಲಾಘನೀಯ ಎಂದರು.
ಚಿಕ್ಕೋಡಿಯ ಉಪವಿಭಾಗಾಧಿಕಾರಿ ಮಾಧವ ಗೀತ್ತೆ ಮಾತನಾಡಿ ನಾನು ಕೂಡಾ ಸರಕಾರಿ ಶಾಲೆಯಲ್ಲಿ ಓದಿ ಐಎಎಸ್ ಪಾಸ ಮಾಡಿದ್ದೇನೆ. ಆದರೆ ಹಳ್ಳಿಗಳಲ್ಲಿಯ ಪ್ರತಿ ಮಕ್ಕಳು ಅಕ್ಷರಸ್ತಗಬೇಕು ನಮ್ಮ ಹಳ್ಳಿಗಳು ಉದ್ದಾರವಾದರೆ ನಮ್ಮ ದೇಶ ಉದ್ದಾರವಾದಂತೆ. ಈಗ ಪ್ರತಿ ಸರಕಾರಿ ಶಾಲೆಗಳ ಇನ್ನಷ್ಟು ಉನ್ನತಿಕರಣ ಹೊಂದಬೇಕಾಗಿದೆ. ಹಳ್ಳಗಳ ಮಕ್ಕಳಿಗೆ ಹೆಚ್ಚಿನ ತಂತ್ರಜ್ಞಾನ ಬಗ್ಗೆ ಅರಿವು ಮೂಡಿಸಲು ಮಹೇಶ ಬೆಲ್ಲದ ಅಂತಹ ಮಹದಾನಿಗಳು ಮುಂದೆ ಬರಬೇಕು ಎಂದರು.
ಉದ್ಯಮಿ ಮಹೇಶ ಬೆಲ್ಲದ ಮಾತನಾಡಿ ಚಿಕ್ಕೋಡಿ, ರಾಯಭಾಗ, ಹುಕ್ಕೇರಿ ಹಾಗೂ ಜಮಖಂಡಿ ವಲಯಗಳ ಸುಮಾರು 25 ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ವಿತರಣೆ ಮಾಡಲಾಗಿದೆ. ಜತೆಗೆ ಕಾರ್ಯಕ್ರಮದಲ್ಲಿ ಹಳ್ಳಿ ವಿಚಾರಗಳ ಜಾಗತೀಕರಣ ಎಂಬ ವಿಷಯದ ಕುರಿತು ಚರ್ಚೆ ನಡೆಸಿ ಹಳ್ಳಿಗಳ, ಆಚಾರ,ವಿಚಾರ, ಸಂಪ್ರದಾಯ, ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ಸಹ ಓಂ ಶಿಕ್ಷಣ ಸಂಸ್ಥೆಯಿಂದೆ ನಡೆದಿದೆ. ಇನ್ನು ಓಂ ಶಿಕ್ಷಣ ಸಂಸ್ಥೆಯಲ್ಲಿ ತ್ರಿಡಿ ಸೌಲಭ್ಯ ಉಳ್ಳ ಡಿಜಿಟಲ್ ಕೊಠಡಿಯನ್ನು ನಿರ್ಮಿಸಿದ್ದೆವೆ. ಈ ಸೇವೆಗಳು ಸರಕಾರಿ ಶಾಲೆಯ ಮಕ್ಕಳಿಗೂ ನೀಡಬೇಕೆಂಬುವದೇ ನಮ್ಮ ಕುಟುಂಬದ ಆಸೆಯಾಗಿದೆ ಎಂದರು.
ಪಿಯು ಉಪನಿರ್ದೇಶಕ ಪಿ.ಆಯ್.ಭಂಡಾರೆ, ಕ್ಷೇತ್ರ ಶಿಕ್ಷಣಾಧಿಕಾರಿ ರಾಯಬಾಗದ ಪ್ರಭಾವತಿ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಹುಕ್ಕೇರಿಯ ಮೋಹನ್ ದಂಡಿನ , ಶಾಂತಾರಾಮ ಜೋಗಳೆ, ಸಿದ್ದು ಬಬಲೇಶ್ವರ, ಎಂ.ಜಿ.ದಾಸರ, ಪ್ರಕಾಶ ಬೆಲ್ಲದ, ಸುರೇಶ ಬೆಲ್ಲದ,ರಮೇಶ ಬೆಲ್ಲದ, ಪಂಕಜ ಬೆಲ್ಲದ,ಬಸಲಿಂಗ ಕಾಡೇಶಗೋಳ,ಮಹಾಲಿಂಗ ಹಂಜಿ,ಮಹದೇವ ಪ್ರದಾನಿ,ಎಂ.ಜಿ.ಜಿವಣಿ,ಎಸ್.ಕೆ.ಕಾಮಗೌಡ, ಮತ್ತು ಪಟ್ಟಣದ ಗುರುಹಿರಿಯರು ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.