ಕಾರವಾರ

ಸರಳ ಸಾಂಖ್ಯಿಕ ದಿನಾಚರಣೆ

ಸರಳ ಸಾಂಖ್ಯಿಕ ದಿನಾಚರಣೆ

ಕಾರವಾರ 29: ಸಾಂಖ್ಯಿಕ ತಜ್ಞ ಪ್ರೊ. ಪ್ರಶಾಂತಚಂದ್ರ ಮಹಾಲನೋಬಿಸ್ ಜನ್ಮದಿನ ಅಂಗವಾಗಿ ಕೋವಿಡ್ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಾಲಯ ಸಭಾಭವನದಲ್ಲಿ ಮಂಗಳವಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಅವರು ಮಹಾಲನೋಬಿಸ್ ಅವರ ಭಾವಚಿತ್ರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಾಂಖ್ಯಿಕ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.  

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ನಾಗೇಶ ರಾಯ್ಕರ್,  ಮುಖ್ಯಯೋಜನಾಧಿಕಾರಿ ವಿನೋದಅಣ್ವೇಕರ್‌, ಸಾಂಖ್ಯಿಕ ಇಲಾಖೆ ಉಪನಿರ್ದೇಶಕಜೆ. ಆರ್‌. ಭಟ್,  ಸಹಾಯಕ ನಿರ್ದೇಶಕಎನ್‌ಆರ್ ಹೆಗಡೆಕರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಎನ್‌.  ಜಿ. ನಾಯ್ಕ ಉಪಸ್ಥಿತರಿದ್ದರು. 


ಸುದ್ದಿ ಓದಿ