ಶಿಗ್ಗಾವ್

ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ

ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ

ಶಿಗ್ಗಾವಿ 13: ಹುಬ್ಬಳ್ಳಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ  ತಾಲೂಕಿನ ಶಿಶುವಿನಾಳದ ಗುರುಗೋವಿಂದ ಭಟ್ಟ ಹಾಗೂ ಸಂತ ಶರೀಫ ವೇದಿಕೆಯಲ್ಲಿ  ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಿತು.

ಎಚ್.ಆರ್. ಸುಜಾತಾ ಅವರ 'ನೀಲಿ ಮೂಗಿನ ನತ್ತು' ಕೃತಿಗೆ ಅಕ್ಕ ಪ್ರಶಸ್ತಿ, ಸನ್ನಿಧಿ ಟಿ.ರೈ ಪೆರ್ಲ ಅವರ 'ಅಮರಾವತಿ' ಕೃತಿಗೆ ಅರಳುಮೊಗ್ಗು ಪ್ರಶಸ್ತಿ ಹಾಗೂ ಡಾ. ಕೆ. ಶಶಿಕಾಂತ ಅವರ 'ಅವ್ವ ಹಾಡಿದ ಕಾಳಿಂಗರಾಯನ ಹಾಡು' ಕೃತಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ ರಂಗಕರ್ಮಿ ಬಿ.ಜಯಶ್ರೀ, ಚನ್ನಮ್ಮ ಬಸವರಾಜ ಬೊಮ್ಮಾಯಿ, ಲೇಖಕ ಚಂದ್ರಶೇಖರ ವಸ್ತ್ರದ ಸಾಹಿತಿ ಡಾ. ವೀರಣ್ಣ ರಾಜೂರ, ಮಾಜಿ ಸಂಸದ ಐ.ಜಿ. ಸನದಿ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ, ಶಿವಾನಂದ ಮ್ಯಾಗೇರಿ ಇದ್ದರು.

ಸುದ್ದಿ ಓದಿ