ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಯರಗಟ್ಟಿ 23: ಸಮೀಪದ ಮುನವಳ್ಳಿ ಪಟ್ಟಣದ ಜೈಂಟ್ಸ್ ಸಪ್ತಾಹದ ಅಂಗವಾಗಿ ಪಟ್ಟಣದ ಸರಕಾರಿ ಪ್ರೌಢಶಾಲೆಯಲ್ಲಿ ಏರಿ್ಡಸಲಾದ ವಿದ್ಯಾರ್ಥಿಗಳಿಗೆ ಚಂದ್ರಯಾನ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಜರುಗಿತು. ಜೈಂಟ್ಸ್ ಗ್ರೂಪ್ ಅಧ್ಯಕ್ಷ ಶಿವಾಜಿ ಮಾನೆ, ಭುಜಂಗರಾವ್ ನಿಕ್ಕಮ್, ಸಂಜೀವಕುಮಾರ ತುಳಜಣ್ಣವರ, ಎನ್.ಎಸ್.ಕಾರಭಾರಿ, ಡಾ.ಎಂ.ಬಿ.ಅಷ್ಟಗಿಮಠ, ಸೂರ್ಯಪ್ರಕಾಶ ಗಂಗಾವತಿ, ವೀರಣ್ಣ ಕೊಳಕಿ, ಅನಿಲ ಕಿತ್ತೂರ, ಬಾಳು ಹೊಸಮನಿ, ಯಲ್ಲಪ್ಪ ಪೂಜೇರ, ಸಿ.ಬಿ.ಕೋನಿ ಹಾಗೂ ಶಿಕ್ಷಕ ವೃಂದದವರು ಇದ್ದರು.