ಪ್ರಿಯಾಂಕಾ ಜಾರಕಿಹೊಳಿ ಜಯಭೇರಿ: ಸಂಭ್ರಮಾಚರಣೆ
ಸಂಕೇಶ್ವರ 04: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪ್ರಿಯಾಂಕಾ ಸತೀಶ ಜಾರಕಿಹೊಳಿ ಇವರು 110719 ಬಹುಮತಗಳಿಂದ ಬಿ.ಜೆ.ಪಿ.ಯ ಅಭ್ಯರ್ಥಿ ಎರಡನೇಯ ಬಾರಿ ಸ್ಪರ್ಧಿಸಿದ ಅಣ್ಣಾಸಾಹೇಬ ಜೊಲ್ಲೆ ಇವರನ್ನು ಸೋಲಿಸಿ ದಾಖಲೆ ನಿರ್ಮಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಲೋಕಸಭೆಗೆ ಪ್ರವೇಶಿಸಿದ ಇವರ ಗೆಲುವಿನ ಸಂತೋಷವನ್ನು ಸಂಕೇಶ್ವರದಲ್ಲಿ ಡಾ: ಜಯಪ್ರಕಾಶ ನಾಗಪ್ಪಾ ಕರಜಗಿ, ಇವರ ಮುಂದಾಳತ್ವದಲ್ಲಿ ರಿಯಾಜ ಫನಿಬಂದ, ಮಹಾದೇವ ಕೇಸರಕರ, ಎಂ.ಬಿ. ಘಸ್ತಿ, ಸಂತೋಷ ಮುಡಸಿ, ದೀಲೀಪ ಹೊಸಮನಿ, ವಿಕ್ರಮ ಕರನಿಂಗ, ಸುಭಾಷ ಕಾಸಾರಕರ, ತಬರೇಜ ಹಜರತಭಾಯಿ, ಶಿವಾ ಕೇರಿಮನಿ, ಮುಖ್ತಾರ ನದಾಫ, ರಾಜು ನದಾಫ, ಲಮಾಣಿ, ಬಾಬು ತೇರಣಿ, ಅಲ್ತಾಫ ಶಾಯನ್ನವರ, ಪ್ರವೀಣ (ಪುಟ್ಟು) ನೇಸರಿ ವಕೀಲರು, ಅವಿನಾಶ ನಲವಡೆ, ಹಾಗೂ ಕಾರ್ಯಕರ್ತರು ಸಂಗೋಳ್ಳಿ ರಾಯಣ್ಣ ವೃತ್ತ, ಮತ್ತು ಶಿವಾಜಿ ಚೌಕ, ಚೆನ್ನಮ್ಮಾ ಸರ್ಕಲ, ಬಸವೇಶ್ವರ ಸರ್ಕಲ, ಭಾರಿ ಪ್ರಮಾಣದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ಮೇಲಿನ ವೃತ್ತಗಳಿಗೆ ಹೂಮಾಲೆ ಹಾಕಿ ಸಂಭ್ರಮಾಚರಣೆ ಮಾಡಿದರು.
ಇಂದು ಕಾಂಗ್ರೆಸ್ ಕಾರ್ಯಕರ್ತರು ಚಿಕ್ಕೋಡಿಗೆ ಪ್ರಕಾಶ ಹುಕ್ಕೇರಿ ಅವರ ನಿವಾಸಕ್ಕೆ ತೆರಳಿ ಅಲ್ಲಿ ತಂಗಿದ್ದ ಸತೀಶ ಜಾರಕಿಹೊಳಿ ಇವರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು.