ಗ್ರಾಮಾಂತರ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ಶಾಸಕ ಬಳ್ಳಾರಿ
ಬ್ಯಾಡಗಿ: ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಾಹನಗಳ ಸಮರ್ಪಕ ಸಂಚಾರಕ್ಕೆ ತೊಂದರೆಯಾಗದಂತೆ ಗ್ರಾಮಾಂತರ ಭಾಗದ ಎಲ್ಲ ಕೂಡು ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.ಪಂಚಾಯತರಾಜ್ ತಾಂತ್ರಿಕ ಉಪವಿಭಾಗದ ವತಿಯಿಂದ ಕೈಗೆತ್ತಿಕೊಂಡಿರುವ 75ಲಕ್ಷ ರೂಗಳ ಅನುದಾನದಡಿ ತಿಮ್ಮೇನಹಳ್ಳಿ- ಸುಣಕಲ್ಲಬಿದರಿ ಹಾಗೂ 50ಲಕ್ಷ ರೂಗಳ ಅನುದಾನದಡಿ ಆಣೂರ- ಬಿಸಲಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ ನಂತರ ಘಾಳಪೂಜಿ ಗ್ರಾಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿಯೊಂದು ಗ್ರಾಮದಲ್ಲೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನೂರಾರು ಕೋಟಿ ರೂಗಳನ್ನು ಮಂಜೂರು ಮಾಡಿದೆ. ಅತಿವೃಷ್ಠಿ ಮತ್ತು ಕೋವಿಡ್ ಸಂಕಷ್ಟದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ಕೂ ಹಿನ್ನಡೆ ಮಾಡದೇ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ಕ್ರಮ ವಹಿಸಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಲಲಿತಮ್ಮ ಗೌಡ್ರ, ಉಪಾಧ್ಯಕ್ಷ ಈಶ್ವರ ನೇಸ್ವಿ, ಪಿಎಲ್ಡಿ ಬ್ಯಾಂಕ ನಿರ್ದೇಶಕ ಸುರೇಶ ಯತ್ನಳ್ಳಿ, ಶೇಖರಗೌಡ ಗೌಡ್ರ, ಗ್ರಾಪಂ ಸದಸ್ಯರಾದ ವೀರನಗೌಡ ಗೌಡ್ರ, ದ್ಯಾಮನಗೌಡ ಪೂಜಾರ, ಹೇಮಂತ ಶೆಟ್ಟರ, ಸಿದ್ದಯ್ಯ ಪಾಟೀಲ, ಬಸವರಾಜ ಹಲಗೇರಿ, ಹನುಮಂತಪ್ಪ ಮಾಳಗಿ, ಎಇಇ ಡಿ.ಎಲ್.ಕಲ್ಲೋಳ್ಕರ್, ಜೆಇ ವೈ.ಕೆ.ಮಟಗಾರ, ಗುತ್ತಿಗೆದಾರ ಯಲ್ಲನಗೌಡ ಕರೇಗೌಡ್ರ, ಅಭಿಜಿತ್ ಹಲಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು