ಬೆಲೆ ಏರಿಕೆಯೇ ಬಿಜೆಪಿ ಸಾಧನೆ: ಸೋಮಣ್ಣಾ ಬೇವಿನಮರದ
ಶಿಗ್ಗಾವಿ 18: ಕಾಂಗ್ರೆಸ್ ಪಕ್ಷವು 54 ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಸಾಕಷ್ಟು ದುರಾಡಳಿತ ಮಾಡಿದೆ ಎನ್ನುವ ಬಿಜೆಪಿ ಸರಕಾರವು ಪೆಟ್ರೋಲ್, ಅಡುಗೆ ಅನಿಲ, ಜನ ಸಾಮಾನ್ಯರಿಗೆ ಹಾಗೂ ಮದ್ಯಮ ವರ್ಗದ ಜನತೆಗೆ ಸಾಕಷ್ಟು ಹಲವಾರು ಸಾಮಗ್ರ್ರಿಗಳ ದರವನ್ನು ಗಗನಕ್ಕೆ ಏರಿಸಿ ಸಾಧನೆಯನ್ನು ಮಾಡಿದ್ದ ಬಿಜೆಪಿ ಸರಕಾರವನ್ನು ಕಿತ್ತೆಸೆಯುವ ಕಾಲ ಬಂದಿದೆ ಎಂದು ವಿ.ಪ.ಮಾಜಿ ಸದಸ್ಯ ಸೋಮಣ್ಣಾ ಬೇವಿನಮರದ ಹೇಳಿದರು.
ತಾಲೂಕಿನ ತಡಸ ಜಿಲ್ಲಾ ಪಂಚಾಯತ ಕ್ಷೇತ್ರದ ಕುನ್ನೂರ ಗ್ರಾಮ ಪಂಚಾಯತ ಕುನ್ನೂರ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ಜರುಗಿದ ಕಾಂಗ್ರೇಸ್ ಪಕ್ಷದ ಪ್ರಜಾ ಪ್ರತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದವರು, ಅಂದು ಬಿಜೆಪಿ ಅಧಿಕಾರಕ್ಕೆ ಬರುವಾಗ ಕಾಂಗ್ರೇಸ್ನಿಂದಾಗಿ 15 ವರ್ಷಗಳ ಕಾಲ ನಮ್ಮ ಆರ್ಥಿಕ ವ್ಯವಸ್ಥೆಯು ಹಿಂದುಳಿದಿದೆ ಎಂದು ಹೇಳಿ ಅಧಿಕಾರಕ್ಕೆ ಬಂದು ರೈತರ ಜನ ಸಾಮಾನ್ಯರ ಬದಕದಂತಾ ಪರಿಸ್ಥಿತಿ ಬಂದೋದಗಿದೆ ಅಂಥವರನ್ನು ಬರುವ ದಿನದಲ್ಲಿ ತಕ್ಕ ಪಾಠವನ್ನು ಕಲಿಸಬೇಕು ಎಂದರು.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಕರ್ಮಕಾಂಡವನ್ನು ತಿಳಿಸಲು ಕಾಂಗ್ರೇಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಪ್ರತಿಯೊಬ್ಬ ಮನೆಯವರೆಗೂ ಮುಟ್ಟಿಸಲು ರಾಜ್ಯದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ ಅವರ ಆದೇಶದ ಮೇರೆಗೆ ತಿಳಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಗ್ಗಾವಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಎನ್.ವೇಂಕೋಜಿ ವಹಿಸಿ ಮಾತನಾಡಿದವರು ಕಾಂಗ್ರೇಸ್ ಪಕ್ಷ ತನ್ನದೇ ಆದ ತತ್ವ ಸಿದ್ದಾಂತವನ್ನು ಪಾಲಿಸುವ ಪಕ್ಷವಾಗಿದೆ ಆದ್ದರಿಂದ ಕೊವಿಡ್ 19 ರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಮೃತರಾಗಿದ್ದಾರೆ ಮೃತರಾದ ಕುಟುಂಬದ ಮಾಹಿತಿಯನ್ನು ನಮಗೆ ನೀಡಬೇಕು ಅಲ್ಲದೆ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಕಾಂಗ್ರೇಸ್ ಕಾರ್ಯಕರ್ತರನ್ನು ಕೂಡಿಸಿಕೊಂಡು ಸಮಿತಿಯನ್ನು ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಎಸ್ಟಿ ಘಟಕದ ಪ್ರದಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಗುರುನಗೌಡ ಪಾಟೀಲ, ಕೆ.ಎಸ್.ಭಗಾಡೆ, ಜಿ.ಪಂ.ಮಾಜಿ ಸದಸ್ಯ ಸಿ.ಎಸ್.ಪಾಟೀಲ, ಸೇರಿದಂತೆ ಹಲವರು ಮಾತನಾಡಿದರು, ಈ ಸಂದರ್ಭದಲ್ಲಿ ಶ್ರೀಕಾಂತ ದುಂಡಿಗೌಡ್ರ, ಪ್ರೇಮಾ ಪಾಟೀಲ್, ಚಂದ್ರಣ್ಣ ನಡುವಿನಮನಿ, ಶಿವಾನಂದ ಬಾಗೂರ, ಹನುಮರೆಡ್ಡಿ ನಡುವಿನಮನಿ, ಕಿರಣಗೌಡ ಎಂ. ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ, ಸಂಗಮೇಶ ಕಂಬಾಳಿಮಠ, ಜಾವೇದ ಸವಣೂರ, ಶ್ರೀಕಾಂತ ಪೂಜಾರ, ಎಫ್ ಸಿ ಪಾಟೀಲ, ಬಿ ಸಿ ಪಾಟೀಲ, ಗುರುಸಿದ್ದಗೌಡ್ರ ಪಾಟೀಲ, ಎಂ.ಎನ್.ಗೌಡರ, ಚಂದ್ರಣ್ಣಾ ಹೆಬ್ಬಾಳ, ಅಣ್ಣಪ್ಪಾ ಲಮಾಣಿ, ಸುಧೀರ ಲಮಾಣಿ, ಬಾಬರ ಬಾವೋಜಿ, ವಸಂತಾ ಬಾಗೂರ, ರಬ್ಬಾನಿ ತರೀನ, ತಹಮೀದ ಖಾಜಿ, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ರಾಮಣ್ಣಾ ಇಂದೂರ, ಪಿ.ಡಿ.ಕಾಳಿ, ಡಿ.ಆರ್ ಬೊಮ್ಮನಹಳ್ಳಿ, ಮಾಬೂಸಾಬ ಜಿಗಳೂರ, ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರು ಅಭಿಮಾನಿಗಳು ಸಭೆಯಲ್ಲಿ ಪಾಲ್ಗೋಂಡಿದ್ದರು.