ಇಂದಿನ ಯುಗದಲ್ಲಿ ಲಿಂಗತಾರತಮ್ಯವನ್ನು ತಡೆಗಟ್ಟಿ: ಡಾ.ಶಿವಾನಂದ ಫಿರೋಜ
ಬೆಟಗೇರಿ 24: ಹೆಣ್ಣು ಮಕ್ಕಳ ರಕ್ಷಣೆ, ಪೋಷಣೆ, ಶಿಕ್ಷಣಕ್ಕೆ ಮಹತ್ವ ನೀಡೋಣ, ಹೆಣ್ಣು ಮಕ್ಕಳ ವಿರುದ್ಧ ನಡೆಯುವ ಶೋಷಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿಯೊಬ್ಬರೂ ಮುಂದಾಗಬೇಕೆಂದು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಖಾಸಗಿ ಆಸ್ಪತ್ರೆ ವೈದ್ಯ ಡಾ. ಶಿವಾನಂದ ಫಿರೋಜ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಜ.24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆ ಕಾರ್ಯಕ್ರಮದ ಪ್ರಯುಕ್ತ ಮಾತನಾಡಿದ ಅವರು, ಇಂದಿನ ಯುಗದಲ್ಲಿ ಲಿಂಗತಾರತಮ್ಯವನ್ನು ತಡೆಗಟ್ಟಲು ಮುಂದಾಗಬೇಕು, ಹೆಣ್ಣು ಮಕ್ಕಳ ಪಡೆದ ತಂದೆ ಅದೃಷ್ಟವಂತನಾಗಿರುತ್ತಾನೆ ಎಂದರು.
ಡಾ.ಶಿವಾನಂದ ಫಿರೋಜ ಅವರ ಹೆಣ್ಣು ಮಗು ತನುಶ್ರೀ ಸೇರಿದಂತೆ ಮತ್ತಿತರ ಹೆಣ್ಣು ಮಕ್ಕಳಿಗೆ ತಮ್ಮ ವೃತ್ತಿ ಗೌರವದ ಸ್ಥಾನಮಾನ ನೀಡಿ ಸಂಭ್ರಮಿಸಿದ ಬಳಿಕ ಸಿಹಿ ವಿತರಿಸಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಿದರು.
ಸ್ಥಳೀಯ ಮುಖಂಡರಾದ ಅರ್ಜುನ ಅಂದಾನಿ, ಲಕ್ಷ್ಮಣ ಹೂಲಿಕಟ್ಟಿ, ಗೀರೀಶ ತೋಟಗಿ, ವಿಜಯ ಹಿರೇಮಠ, ಅಕ್ಷತಾ ಫಿರೋಜ, ಚೂನವ್ವ ಫಿರೋಜ, ಶೋಭಾ ಮುಧೋಳ, ಸೇರಿದಂತೆ ಗಣ್ಯರು, ಹಿರಿಯ ನಾಗರಿಕರು, ಯುವಕರು, ಸ್ಥಳೀಯರು, ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು, ಮತ್ತೀತರರು ಇದ್ದರು.