ತಿರಂಗ ಧ್ವಜ ಪಾದಯಾತ್ರೆಗೆ ಅಧ್ಯಕ್ಷ ವಿಠ್ಠಲ ಜಿ ಕೊಳ್ಳೂರ ಚಾಲನೆ
ಸಿಂದಗಿ: ಪಟ್ಟಣದ ಭೀಮಾ ಯೂನಿವರ್ಸಲ್ ಸೆಂಟ್ರಲ್ ಸ್ಕೂಲ್ ಮತ್ತು ಬ್ಲಾಕ್ ಕಾಂಗ್ರೆಸ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ವದ ಅಂಗವಾಗಿ 75 ಮೀಟರ ತಿರಂಗ ಧ್ವಜ ಪಾದಯಾತ್ರೆಗೆ ಸಂಸ್ಥೆಯ ಹಾಗೂ ಬ್ಲಾಕ್ ಸಮಿತಿ ಅಧ್ಯಕ್ಷ ವಿಠ್ಠಲ ಜಿ ಕೊಳ್ಳೂರ ಮತ್ತು ಕಾಂಗ್ರೆಸ ಪಕ್ಷದ ಮುಖಂಡರೊಂದಿಗೆ ಪಟ್ಟಣದ ನೂಲಿಚಂದಯ್ಯ ವೃತ್ತದಲ್ಲಿ ಚಾಲನೆ ನೀಡಿದರು.
ನಂತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು 75 ಮೀಟರ ತಿರಂಗ ಧ್ವಜವನ್ನು ಹಿಡಿದು, ದೇಶಭಕ್ತಿ ಘೊಷಣೆಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು.
ಕಾಂಗ್ರೆಸ ಪಕ್ಷದ ಮುಖಂಡರು ಎಲ್ಲಾ ವೃತ್ತಗಳ ಮಹಾನ ನಾಯಕರಿಗೆ ಮಾಲಾರೆ್ಣ ಸಲ್ಲಿಸುತ್ತಾ ಪಾದಯಾತ್ರೆಯ ಪ್ರಾರಂಭದಿಂದ ಕೊನೆಯವರೆಗೂ ಘೊಷಣೆಗಳನ್ನು ಕೂಗುತ್ತಾ ನಡೆದರು. ಟಿಪ್ಪುಸುಲ್ತಾನ ವೃತ್ತ ಮಾರ್ಗವಾಗಿ, ಮಹಾತ್ಮಗಾಂಧಿಜೀ ವೃತ್ತ, ಡಾ. ಬಾಬಾಸಾಹೇಬ ವೃತ, ಅಂಬೀಗರ ಚೌಡಯ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತದ ಮಾರ್ಗವಾಗಿ, ಸ್ವಾಮಿ ವಿವೇಕಾನಂದ ವೃತ್ತ, ಕನಕದಾಸ ವೃತ್ತದಲ್ಲಿ ಮುಕ್ತಾಯಗೊಳಿಸಲಾಯಿತು. ಈ ಪಾದಯಾತ್ರೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನ ನಾಯಕರ ವೇಷಧರಿಸಿ ರಥಯಾತ್ರೆಯಲ್ಲಿ ಕುಳಿತು ವಿಶೇಷ ಗಮನ ಸೆಳೆದರು.
ಸಂಸ್ಥೆಯ ಪ್ರಿನ್ಸಿಪಾಲ ದಶರಿ ಶಾಂತಾ ಹಾಗೂ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು, ಸಂಸ್ಥೆಯ ಎಲ್ಲ ಶಿಕ್ಷಕರು, ಸಿಬ್ಬಂದಿವರ್ಗ ಮತ್ತು ವಿಧ್ಯಾರ್ಥಿ, ವಿದ್ಯಾರ್ಥಿನಿಯರು, ಹಾಗೂ ಕಾಂಗ್ರೆಸ ಪಕ್ಷದ ಮುಖಂಡರಾದ ಮುಸ್ತಾಕ ಮುಲ್ಲಾ, ಮಲ್ಲಣ್ಣ ಸಾಲಿ, ಶಿವನಗೌಡ ಬಿರಾದಾರ, ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ಮಹಿಬೂಬ ತಾಂಬೋಳಿ(ಎಂಆರ್ಟಿ), ಸಿದ್ದಣ್ಣ ಹಿರೇಕುರಬರ, ಸೈಪನ ನಾಟಿಕಾರ, ರಾಜಶೇಖರ ಕೂಚಬಾಳ, ಎಸ್ ಬಿ ಪಾಟೀಲ, ಎಸ್.ಕೆ.ಪೂಜಾರಿ, ನಿಂಗಣ್ಣ ಚಟ್ಟಿ, ಇರ್ಾನ ಆಳಂದ, ರಾಘವೇಂದ್ರ ಪೂಜಾರಿ, ಯಲ್ಲು ಕೆರಕಿ, ಶಾರದಾ ಬೆಟಗೇರಿ, ಪ್ರತಿಭಾ ಕಲ್ಲೂರ, ರಮೇಶ ನಡುವಿನಕೇರಿ, ರಮೇಶ ಗುಬ್ಬೆವಾಡ, ಕೆಂಚಪ್ಪ ಕತ್ನಳ್ಳಿ, ಎಮ್ ಕೆ ಸೊನ್ನದ, ಮಾಂತೇಶ ಅಮ್ಮಾಗೊಳ, ದೇವಿಂದ್ರ ಪೂಜಾರಿ, ಶಪಿ ಬಿಜಾಪೂರ, ಮಹಾದೇವ ಕೊಂಡಗೂಳಿ, ಸಿದ್ದಲಿಂಗ ಗುಂಡಾಪೂರ, ಮಾಳು ಸೊನ್ನದ, ಲಕ್ಷ್ಮಣ ಜೇರಟಗಿ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.