ಶಿಗ್ಗಾವ್

ಅಧ್ಯಕ್ಷ- ಉಪಾಧ್ಯಕ್ಷರಿಗೆ ಸನ್ಮಾನ

ಅಧ್ಯಕ್ಷ- ಉಪಾಧ್ಯಕ್ಷರಿಗೆ ಸನ್ಮಾನ

ಶಿಗ್ಗಾವಿ 12:  ನೂತನವಾಗಿ ಪುರಸಭೆಗೆ ಅಧ್ಯಕ್ಷರಾಗಿ ಶ್ರೀಕಾಂತ ಬುಳ್ಳಕ್ಕನವರ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ಬ್ಯಾಹಟ್ಟಿ ಅವರಿಗೆ ಪಟ್ಟಣದ ನಾಮದೇವ ಸಿಂಪಿ ಸಮಾಜದವತಿಯಿಂದ ವಿಠೋಭಾ ಸಭಾ ಭವನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಸುರೇಶ ಮೂಳೆ ಹಾಗೂ ಸಮಾಜದ ಮುಖಂಡರಾದ ಸುಧೀರ ಮಾಳವಾದೆ, ಕಮಲಾಕರ ಗಂಜೀಗಟ್ಟಿ, ಕೃಷ್ಣಾ ಮಾಳವಾದೆ, ಗೋಪಾಲ ಮಾಳವಾದೆ, ನಾಮದೇವ ಉಂಡಾಳೆ, ಸಮಾಜದ ಯುವ ಮುಖಂಡ ಪ್ರತೀಕ ಕೊಳೇಕರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಸುದ್ದಿ ಓದಿ