ಹೂವಿನ ಹಡಗಲಿ

ಹೂವಿನಹಡಗಲಿ ಗೃಹ ರಕ್ಷಕ ಕೆ.ರಾಜಪೀರ ರಾಷ್ಟ್ರಪತಿ ಪದಕ

ಹೂವಿನಹಡಗಲಿ ಗೃಹ ರಕ್ಷಕ ಕೆ.ರಾಜಪೀರ ರಾಷ್ಟ್ರಪತಿ ಪದಕ

ಹೂವಿನಹಡಗಲಿ : ಹೂವಿನಹಡಗಲಿಯ ಕೆ.ರಾಜಪೀರ ಅವರು ಗೃಹರಕ್ಷಕ  ಇಲಾಖೆಯಲ್ಲಿ ಅತ್ಯುತ್ತಮ ಸೇವೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಂದ ರಾಷ್ಟ್ರಪತಿ ಪದಕ ಲಭಿಸಿದೆ.  

ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದ 2020ನೇ ಸಾಲಿನ ರಾಷ್ಟ್ರಪತಿ ಪದಕವನ್ನು ಈಚೆಗೆ ಬೆಂಗಳೂರು ಗಾಜಿನ ಮನೆಯಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪದಕವನ್ನು ಪಡೆದುಕೊಂಡರು.1989ರಲ್ಲಿ ಗೃಹರಕ್ಷಕ ಆಯ್ಕೆಯಾಗಿ ನಂತರ 1994ರಲ್ಲಿ ಗೃಹರಕ್ಷಕ ದಳದಿಂದ ಆಲ್ ಇಂಡಿಯಾ ಅಂತರ್ ರಾಜ್ಯ ಕ್ರೀಡೆಯಲ್ಲಿ ಹರಿಯಾಣ, ದೆಹಲಿ,ಲಕ್ನೋ  ಮೂರು ಬಾರಿ ಆಯ್ಕೆಯಾಗಿದ್ದಾರೆ. 1996ರಲ್ಲಿ ಚಿತ್ರದುರ್ಗ ಸಂತೆ ಹೊಂಡದಲ್ಲಿ ಖಾಸಗಿ ಬಸ್ ಬಿದ್ದು 40-45ಜನರು ಮೃತಪಟ್ಟಿದ್ದರು ಅಲ್ಲಿ ಶವಗಳನ್ನು ಹೊರ ತೆಗೆಯಲಾಯಿತು. 2010ರಲ್ಲಿ ತುಂಗಭದ್ರಾ ನದಿಯಲ್ಲಿ ಹುಬ್ಬಳ್ಳಿಯ ಮೂಲದ 8 ಜನರು ನೀರು ಪಾಲಾಗಿದ್ದು,ಶವಗಳನ್ನು ತೆಗೆಯುವಲ್ಲಿ ಭಾಗವಹಿಸಿದ್ದರು.  

2014ರಲ್ಲಿ ಗೃಹರಕ್ಷಕ ಸೇವೆಗೆ ಮುಖ್ಯಮಂತ್ರಿ ಪದಕವನ್ನು ರಾಜಪೀರ ಅವರು ಪಡೆದುಕೊಂಡಿದ್ದರು. ಸಂಘ,ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಈಚೆಗೆ ಪಟ್ಟಣದ ಗವಿಮಠದಲ್ಲಿ ಡಾ.ಹಿರಿಶಾಂತವೀರಸ್ವಾಮೀಜಿ ಅವರು ಲಿಂಗೇಶ್ವರ ಪ್ರಶಸ್ತಿಯನ್ನು ಪಡೆದುಕೊಂಡರು. ಜೇಸ್ಕಾಂ ಇಲಾಖೆಯಲ್ಲಿ ಭಾನುವಾರ ಸೇವೆಯ ಸಮಯದಲ್ಲಿ ಜೇಸ್ಕಾಂ ಸಿಬ್ಬಂದಿ ಗರ್ಭಿಣಿ ರಕ್ತ ಮಡುವಿನಲ್ಲಿ ಬಿದ್ದಿದ್ದು ನೋಡಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು ಎಂದು ಹೇಳುವಾಗ ರಾಜಪೀರ ಅವರು ಕಣ್ಣೀರು ತಂದರು. 

ತುರ್ತು ಸೇವೆಗಳ ಇಲಾಖೆ ಗೃಹರಕ್ಷಕ ದಳದಲ್ಲಿ ಇಂದಿನ ಯುವ ಜನತೆಗೆ ಸ್ಪೂರ್ತಿ ರಾಜಪೀರ ಅವರು ಬೆಂಕಿ ಅವಘಡ, ವಾಯು ಅವಘಡ ಹಾಗೂ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಇಲಾಖೆಯಿಂದ ಅತ್ಯುತ್ತಮ ಕೆಲಸ ಸ್ಪೂರ್ತಿಯಾಗಿದ್ದು ಜನ ಮೆಚ್ಚುಗೆ ಕೆಲಸವನ್ನು ಮಾಡಬೇಕು ಜತೆಗೆ ಇಲಾಖೆ ಅಧಿಕಾರಿ ಶಂಕರರಾವ್ ಅವರ ಮಾರ್ಗದರ್ಶನ ದಿಂದ ರಾಷ್ಟ್ರ​‍್ರಶಸ್ತಿ ಲಭಿಸಿದೆ ಎಂದ ಅವರು ಪತ್ರಿಕೆ ಜತೆಗೆ ಸೇವೆಯ ಬಗ್ಗೆ ರಾಜಪೀರ ವಿವರಿಸಿದರು. 


ಸುದ್ದಿ ಓದಿ