ನೋಡಲ್ ಅಧಿಕಾರಿಗಳಿಗೆ ಪೂರ್ವಬಾವಿ ಸಭೆ
ಶಿಗ್ಗಾವಿ: ಗ್ರಾಮ ಹಾಗೂ ಪುರಸಭೆ ವ್ಯಾಪ್ತಿಯ ಕೋವಿಡ್ ನಿರ್ವಹಣಾ ಸಮಿತಿಯ ನೋಡಲ್ ಅಧಿಕಾರಿಗಳಿಗೆ ಪೂರ್ವಬಾವಿ ಸಭೆ ಹಾಗೂ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿಯನ್ನು ಸವಣೂರ ಉಪಾವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ನೇತೃತ್ವದಲ್ಲಿ ನೇರವೇರಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ, ಸಿ.ಪಿ.ಐ ಬಸವರಾಜ ಹಳಬಣ್ಣವರ, ತಾಲೂಕ ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ ಕುಡಚಿ, ಶಿಗ್ಗಾವಿ ಪುರಸಭೆ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಬಂಕಾಪೂರ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಸೇರಿದಂತೆ ಎಲ್ಲ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.