ತಾಳಿಕೋಟಿ

ಪತ್ರಿಕಾ ದಿನಾಚರಣೆಯ ಪ್ರಯುಕ್ತ ಪೂರ್ವಭಾವಿ ಸಭೆ

ಪತ್ರಿಕಾ ದಿನಾಚರಣೆಯ ಪ್ರಯುಕ್ತ ಪೂರ್ವಭಾವಿ  ಸಭೆ

ತಾಳಿಕೋಟೆ12: ಅಖಿಲ ಕರ್ನಾಟಕ ಪತ್ರಕರ್ತರ ಸಂಘ(ರಿ) ತಾಳಿಕೋಟೆ ಘಟಕದ ವತಿಯಿಂದ  ಅ.28ರಂದು ರವಿವಾರ ಸಾಯಂಕಾಲ 4 ಘಂಟೆಗೆ ಮಹಾರಾಣಾ ಪ್ರತಾಪ ಸಿಂಹರ ವೃತ್ತದಲ್ಲಿ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದರ ಪ್ರಯುಕ್ತ ಪ್ರವಾಸಿ ಮಂದಿರದಲ್ಲಿ  ತಾಳಿಕೋಟೆ ವಿವಿಧ ಸಂಘಟನೆ ಪದಾಧಿಕಾರಿಗಳು  ಪೂರ್ವಭಾವಿ ಸಭೆಗೆ ಹಾಜರಿದ್ದು ಕಾರ್ಯಕ್ರಮ ರೂಪುರೇಷೆಗಳ ಬಗ್ಗೆ ಸಮಗ್ರ ಚರ್ಚೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಮಾಜಸೇವೆ, ಸೈನಿಕರಿಗೆ,  ಪತ್ರಕರ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು. ರಾಜ್ಯ ಹಾಗೂ  ಜಿಲ್ಲಾಮಟ್ಟದ ಅತಿಥಿಗಳು ಆಗಮಿಸುವುದಾಗಿ ಅ ಕ ಪ ಸಂ ತಾಳಿಕೋಟೆ ಅಧ್ಯಕ್ಷರಾದ ಅಲ್ಲಾಭಕ್ಷ ಚಳ್ಳಿಗಿಡದ ತಿಳಿಸಿಸಿದರು. ಈ ಸಮಯದಲ್ಲಿ ದೇವು ಕುಚಬಾಳ ಅಕಪಸಂ ತಾಲೂಕ ಉಪಾಧ್ಯಕ್ಷರು, ವಿಶ್ವನಾಥ ಎಲ ಹಜೇರಿ ಪ್ರಧಾನ ಕಾರ್ಯದರ್ಶಿಗಳು, ಕಿಶೋರ ಕುಮಟೆ, ಲಕ್ಷ್ಮಣ ಕಲಾಲ, ಕುತುಬು ಮುಲ್ಲಾ, ಬಸ್ಸು ಕಟ್ಟಿಮನಿ ಅಂಬೇಡ್ಕರ ಸೇನೆ ತಾಲೂಕ ಅಧ್ಯಕ್ಷರು, ಕಟ್ಟಿಮನಿ ಅಂಬೇಡ್ಕರ್ ಸೇನೆ ತಾಲೂಕ ಕಾರ್ಯದರ್ಶಿಗಳು, ದೇವು ಗೊಟಗುಣಕಿ ದಸಂಸ ತಾಲೂಕ ಸಂಘಟನಾ ಸಂಚಾಲಕರು, ನಜೀರ ಚೋರಗಸ್ತಿ ಡಿ ಎಮ್ ಎಸ ಜಿಲ್ಲಾ ಯುವ ಘಟಕ ಅಧ್ಯಕ್ಷ, ಕಾಶಿನಾಥ ಕಟ್ಟಿಮನಿ, ನಾಗರಾಜ್ ಕಜಕೋಶ,  ಭೀಮಶಂಕರ ಸೋನಾರ, ಖಾಜಾ ಪಟೇಲ್ ಬಿರಾದರ, ಸಲೀಂ ಕಸತಿ ಗಾರ ಹಲವರು ಉಪಸ್ಥಿತರಿದ್ದರು 

ಸುದ್ದಿ ಓದಿ