ರಾಣೆಬೆನ್ನೂರ

ದೇವಿಕಾ ಪದವಿಪೂರ್ವ ಕಾಲೇಜು: ಪ್ರತಿಭಾ ಪುರಸ್ಕಾರ

ದೇವಿಕಾ ಪದವಿಪೂರ್ವ ಕಾಲೇಜು: ಪ್ರತಿಭಾ ಪುರಸ್ಕಾರ

ರಾಣೆಬೆನ್ನೂರು 10:  ಇಲ್ಲಿನ ಗಣೇಶ್ ನಗರದ ಪ್ರತಿಷ್ಠಿತ ಶ್ರೀ ವೆಂಕಟೇಶ್ವರ ವಿದ್ಯಾಸಂಸ್ಥೆಯ ದೇವಿಕಾ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ, 2022- 23 ನೇ ಸಾಲಿನ ಪಿಯುಸಿ  ವಿದ್ಯಾರ್ಥಿಗಳ ಸ್ವಾಗತ ಮತ್ತು21 ಮತ್ತು22ನೇ ಸಾಲಿನ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗಣೇಶ್ ಓದುಗೌಡರ, ಅವರು ಸಮಾಜದಲ್ಲಿ ಸಮಾನತೆ ಸಾಧಿಸಬೇಕಾದರೆ, ಬದುಕನ್ನು ರೂಪಿಸುವ,ಬಹುಮಾಧ್ಯಮಶಿಕ್ಷಣ ತಾರಕ ಮಂತ್ರವಾಗಿದೆ. ವಿದ್ಯಾರ್ಥಿ ಜೀವನ ಬಹು ಮಹತ್ವ ಪಡೆದಿದೆ ಎಂದ ಅವರು, ಶಿಕ್ಷಣದ ಜೊತೆಜೊತೆಗೆ ವ್ಯಕ್ತಿತ್ವವನ್ನು ನಿರೂಪಿಸಿ ಕೊಳ್ಳಲು  ಮುಂದಾಗಬೇಕು ಎಂದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ನ್ಯಾಯವಾದಿ  ಸಿ.ಆರ್‌. ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರತಿಭಾ ಸಂಪನ್ನರಾದ, ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದೆ  ( ವಿಜ್ಞಾನ) ತ್ರಿವೇಣಿ ರಾಥೋಡ್ 25, ಸಾವಿರ ನಗದು ಮೂತ್ತ, ಮತ್ತು ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ ವೈಷ್ಣವಿ ಮಾಳದಕರ್ 10, ಸಾವಿರ ಗುರುಗಳೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಆಡಳಿತಾಧಿಕಾರಿ ಶ್ರೀಮತಿ ವಿಜಯ ಪಾಟೀಲ್, ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಸುಜಾತಾ ಸಂಗಡಿಗರು ಪ್ರಾರ್ಥಿಸಿದರು. ಕಾಲೇಜು ಪ್ರಾಂಶುಪಾಲ ದಯಾನಂದ ಹರಿಹರ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖುಷಿ ಟಿ ಎಚ್  ವರದಿ ವಾಚಿಸಿದರು. ಗೌತಮಿ ಚವ್ಹಾಣ ನಿರೂಪಿಸಿ, ಕುಮಾರಿ ಚವ್ಹಾಣ ವಂದಿಸಿದರು. 


ಸುದ್ದಿ ಓದಿ