ತಾಳಿಕೋಟಿ

ಪ್ರತಿಭಾ ಕಾರಂಜಿ ಅದ್ಭುತ ವೇದಿಕೆ: ಡಾ. ಪ್ರಭುಗೌಡ

ಪ್ರತಿಭಾ ಕಾರಂಜಿ ಅದ್ಭುತ ವೇದಿಕೆ: ಡಾ. ಪ್ರಭುಗೌಡ

ಲೋಕದರ್ಶನ ವರದಿ 


ತಾಳಿಕೋಟಿ 22: ಮಕ್ಕಳಲ್ಲಿರುವ ಅಗಾಧವಾದ ಜ್ಞಾನ ಹಾಗೂ ಅದ್ಭುತವಾದ ಪ್ರತಿಭೆಯನ್ನು ಅನಾವರಣಗೊಳಿಸಿ ಅವರು ಸಮಾಜಕ್ಕೆ ಒಂದು ಅಮೂಲ್ಯವಾದ ಆಸ್ತಿ ಆಗುವ ನಿಟ್ಟಿನಲ್ಲಿ ಸಿದ್ಧಗೊಳಿಸುವ ವೇದಿಕೆ ಪ್ರತಿಭಾ ಕಾರಂಜಿ ಕಾರ್ಯಕ್ರಮವಾಗಿದೆ ಎಂದು ನಾಡಿನ ಖ್ಯಾತ ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ ತಿಳಿಸಿದರು. 

ಸಮೀಪದ ಬೊಮ್ಮನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿ.ಪಂ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯ ಅಧಿಕಾರಿಗಳ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ತುಂಬಗಿ ಕ್ಲಸ್ಟರ್ ಮಟ್ಟದ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಜಿ. ನಾಯಕ ಮಾತನಾಡಿ ಪ್ರತಿಯೊಂದು ಮಗುವಿನಲ್ಲಿಯೂ ದೇವರು ಒಂದಿಲ್ಲಾ ಒಂದು ಪ್ರತಿಭೆಯನ್ನಿಟ್ಟಿದ್ದಾನೆ. ಅದನ್ನು ಗುರುತಿಸಿ ಹೊರತೆಗಿಯುವ ಕೆಲಸ ಇಂದು ನಮ್ಮ ಶಿಕ್ಷಕರು ಮಾಡಬೇಕಿದೆ. ಇದಕ್ಕಾಗಿಯೇ ಸರಕಾರ ಈ ಕಾರ್ಯಕ್ರಮ ನಡೆಸುತ್ತಿದೆ ಎಂದರು. 

ಕೆಪಿಸಿಸಿ ಸದಸ್ಯ ಬಿ.ಎಸ್‌. ಪಾಟೀಲ (ಯಾಳವಾರ), ಜಿ.ಪಂ. ಮಾಜಿ ಸದಸ್ಯೆ ಗೌರಮ್ಮ ಮುತ್ತತ್ತಿ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ. ದರಿಕಾರ ಮಾತನಾಡಿದರು.  

ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯ ಶಿವಾನಂದ ದೇಸಾಯಿ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ, ತುಂಬಗಿ ಗ್ರಾಪಂ ಅಧ್ಯಕ್ಷ ನಿಂಗನಗೌಡ ಚೌಧರಿ, ಬಾಲು ತಳವಾರ, ಗ್ರಾಪಂ ಉಪಾಧ್ಯಕ್ಷ ಶಿವಶಂಕರ​‍್ಪ ಕಟ್ಟಿಮನಿ, ಸದಸ್ಯೆ ಯಮನಪ್ಪ ಮಸರಕಲ್ ಸಾಹುಕಾರ, ಶಿಕ್ಷಕಿ ಅಂಬಿಕಾ ಗೊಗಿ, ಜಿ.ಕೆ. ಪತ್ತಾರ, ಪಿ.ಡಿ.ಓ. ನಿಂಗನಗೌಡ ದೊಡಮನಿ, ಜಗನ್ನಾಥ ಮಸರಕಲ್, ಎಸ್‌.ಎಸ್‌. ಹಿರೇಮಠ, ರಾಜು ವಿಜಾಪೂರ, ಕಾಶಿನಾಥ ಸಜ್ಜನ ಇದ್ದರು. 


ಸುದ್ದಿ ಓದಿ