ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಬ್ಯಾಡಗಿ: ತಾಲೂಕಿನ ಕುಮ್ಮೂರು ಗ್ರಾಮದ ಫಾಸಿ ಪ್ರಭಾವತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮುತ್ತಕ್ಕ ನೀಲಕಂಠಪ್ಪ ಕುಮ್ಮೂರು ಪ್ರತಿಷ್ಠಾನದ ವತಿಯಿಂದ ತಾಲೂಕಿನ ಕುಮ್ಮೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಯೋಜಿಸಿದ್ದ ಪ್ರಸಕ್ತ 2022 -23ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕು.ಕಾವ್ಯಾ ದ್ಯಾವಕ್ಕಳವರ (601/625) ವಿದ್ಯಾರ್ಥಿನಿಗೆ 15ಸಾವಿರ ರೂ, ದ್ವಿತೀಯ ಸ್ಥಾನ ಪಡೆದ ಕು.ಸಾಕಮ್ಮ ಹಿರೇಹಳ್ಳೆರ (591/625) ವಿದ್ಯಾರ್ಥಿನಿಗೆ 13ಸಾವಿರ ರೂ, ಮತ್ತು ತೃತೀಯ ಸ್ಥಾನ ಪಡೆದ ಕು.ಎಲ್ಲಮ್ಮ ಸಾಲೇರ ಹಾಗೂ ಶಂಭು ತಡಸದ ಅವರಿಗೆ ತಲಾ 6ಸಾವಿರ ರೂ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ನಿವೃತ್ತ ಉಪ ತಹಶೀಲ್ದಾರ ನೀಲಕಂಠಪ್ಪ ಕುಮ್ಮೂರು, ಕಾಗಿನೆಲೆ ಪೊಲೀಸ್ ಠಾಣೆಯ ಎಎಸ್ಐ ಅಶೋಕ ಕೊಂಡ್ಲಿ ಮತ್ತು ಚನ್ನಬಸಪ್ಪ ದಾಸರ ಅವರುಗಳು ಮಕ್ಕಳಿಗೆ ಸನ್ಮಾನಿಸಿ ನಗದು ಪುರಸ್ಕಾರವನ್ನು ವಿತರಿಸಿದರು.
ರೋಟರಿ ಕ್ಲಬ್ ಬ್ಯಾಡಗಿ ವತಿಯಿಂದ ಅಧ್ಯಕ್ಷ ಮಂಜುನಾಥ ಉಪ್ಪಾರ ಶಾಲೆಗೆ ವಿಲ್ ಚೇರ್ ಡೊನೇಟ್ ಮಾಡಿದರಲ್ಲದೇ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಗಳನ್ನು ನೀಡಿ ಪುರಸ್ಕರಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಸಾಹಿತಿ ಸತೀಶ ಕುಲಕರ್ಣಿ, ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಾದೇವ ಕರಿಯಣ್ಣನವರ, ಗುರುರಾಜ ಚಂದ್ರಿಕೇರ, ರೋಟರಿ ಸಂಸ್ಥೆಯ ಉಪಾಧ್ಯಕ್ಷ ಪವಾಡೆಪ್ಪ ಆಚನೂರ, ಎಸ್’ಡಿಎಂಸಿ ಉಪಾಧ್ಯಕ್ಷರು ಹಾಗೂ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.