ಪುಟ್ಬಾಲ್ ಪಂದ್ಯಾವಳಿ: ಪ್ರಥಮ ಹಾವೇರಿ ತಂಡಕ್ಕೆ ದ್ವಿತೀಯ
ರಾಣೇಬೆನ್ನೂರ ನವೆಂಬರ್ 04:-ಕನ್ನಡ ರಾಜೋತ್ಸವದ ಪ್ರಯುಕ್ತ ಡಿ-ಯುನೈಟೆಡ್ ಪುಟ್ಬಾಲ್ ಅಕಾಡೆಮಿ ವತಿಯಿಂದ ಮಂಗಳವಾರ ನಗರದಲ್ಲಿ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾವಳಿಗಳು ನಡೆದವು.
ಡಿವೈಎಸ್ಪಿ ಟಿ.ಸುರೇಶ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಹಿರಿಯರ ವಿಭಾಗದಲಿ ್ಲರಾಣೇಬೆನ್ನೂರು ಪುಟ್ಬಾಲ್ ಕ್ಲಬ್ ಪ್ರಥಮ ಹಾಗೂ ಹಾವೇರಿ ಪುಟ್ಬಾಲ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡವು. ಕಿರಿಯರ ವಿಭಾಗದಲ್ಲಿ ಹರಿಹರದ ಡಿ-ಯುನೈಟೆಡ್ ಪುಟ್ಬಾಲ್ ಅಕಾಡೆಮಿ ಪ್ರಥಮ ಹಾಗೂ ನಗರದ ರುತ್ವಿಕಾ ಪೌಂಡೇಶನ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ಕ್ರೀಡಾಕೂಟದಲ್ಲಿ ಹರಿಹರ, ದಾವಣಗೇರಿ, ಹಾವೇರಿ ಹಾಗೂ ಬ್ಯಾಡಗಿ ಸೇರಿದಂತೆ ಅನೇಕ ತಂಡಗಳು ಭಾಗವಹಿಸಿದ್ದವು.
ಬಿಜೆಪಿ ನಗರ ಘಟಕದ ಅಧ್ಯಕ್ಷ ದೀಪಕ್ ಹರಪನಹಳ್ಳಿ, ಯುವ ಘಟಕದ ಅಧ್ಯಕ್ಷ ಶಿವಯೋಗಿ ಅಸುಂಡಿ, ಪ್ರವೀಣಕುಮಾರ ಸಿ.ಎಮ್.,ಡೊಮನಿಕ್ ಆಂಟೋನಿ ಸೇರಿದಂತೆ ಮತ್ತಿತರು ಇದ್ದರು.