ಕಾರವಾರ

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಣವ ಪ್ರಥಮ

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಣವ ಪ್ರಥಮ

ಕಾರವಾರ 16: ಪ್ರಪಂಚದಲ್ಲಿ ನೀರಿನ ಸಮಸ್ಯೆಯನ್ನು ಅರಿತು ನೆಹರು ಯುವ ಕೇಂದ್ರ ಕಾರವಾರ ಇವರು ಮಳೆಯ ನೀರಿನ ಕೊಯಿಲು ವಿಷಯವಾಗಿ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಿದರು.

ಸ್ಪರ್ಧೆಯಲ್ಲಿ   ಸೇಂಟ್ ಮೈಕಲ್ ಸ್ಕೂಲಿನ ವಿದ್ಯಾರ್ಥಿ ಪ್ರಣವ ತಾರಾನಾಥ ಹರಿಕಂತ್ರ, ಪ್ರಥಮ ಸ್ಥಾನವನ್ನು ಪಡೆದಿದ್ದಾನೆ.

ವಿದ್ಯಾರ್ಥಿಯು ಈ ವಿಜ್ಞಾನ ಮಾದರಿಯಲ್ಲಿ ಹಂಚಿನ ಛಾವಣೆ ಮನೆ, ಆರ್.ಸಿ.ಸಿ ಛಾವಣಿ, ಅರಣ್ಯದಲ್ಲಿ, ರೈತರ ಹೊಲದಲ್ಲಿ, ಹೈವೇಗಳಲ್ಲಿ ಮಳೆ ನೀರನ್ನು ಯಾವ ರೀತಿಯಾಗಿ ಸಂಗ್ರಹಿಸಬೇಕೆಂದು ಸವಿಸ್ತಾರವಾಗಿ ತಿಳಿಸಿದ್ದಾನೆ.

ಈ ವಿದ್ಯಾರ್ಥಿಯ ಯಶಸ್ಸಿಗೆ ಸೇಂಟ್ ಮೈಕಲ್ ಸ್ಕೂಲಿನ ಮುಖ್ಯಾಧ್ಯಾಪಕಿ ಹಾಗೂ ಶಿಕ್ಷಣ ವೃಂದದವರು ಅಭಿನಂದಿಸಿದರು.

ಸುದ್ದಿ ಓದಿ