ಅಥಣಿ

ಎಐಎಮ್‌ಐಎಮ್ ಪಕ್ಷಕ್ಕೆ ಪ್ರಮೋದ ಹಿರೇಮನಿ ಸೇರ್ಪಡೆ

ಎಐಎಮ್‌ಐಎಮ್ ಪಕ್ಷಕ್ಕೆ ಪ್ರಮೋದ ಹಿರೇಮನಿ ಸೇರ್ಪಡೆ

ಲೋಕದರ್ಶನ ವರದಿ 

ಅಥಣಿ 04: ಪುರಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ ಅಸಾ ಉದ್ದೀನ್ ಓವೈಸಿ ನೇತೃತ್ವದ ಎಐಎಮ್‌ಐಎಮ್ ಪಕ್ಷವನ್ನು ಸಂಘಟಿಸಲಾಗುವುದು ಎಂದು ರಾಜ್ಯ ಕಾರ್ಯದರ್ಶಿ ಲತೀಫಖಾನ ಪಠಾಣ ಹೇಳಿದರು.  

ಅವರು ಸ್ನೇಹ ಜ್ಯೋತಿ ಅಂಧ ಮಕ್ಕಳ ಶಾಲಾ ಆವರಣದಲ್ಲಿ ನ್ಯಾಯವಾದಿ ಪ್ರಮೋದ ಹಿರೇಮನಿ ಇವರನ್ನು ಪಕ್ಷಕ್ಕೆ ಬರಮಾಡಿಕೊಂಡು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 

          ತೆಲಂಗಾಣಾ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳ ವಿಧಾನ ಸಭೆ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ ಪಕ್ಷವನ್ನು ಸಂಘಟಿಸಲಾಗಿದೆ ಮುಂಬರುವ ದಿನಗಳಲ್ಲಿ  ಉತ್ತರ ಪ್ರದೇಶ ಚುನಾವಣೆಯಲ್ಲಿಯೂ ಸಹ ಎ.ಐ.ಎಮ್‌.ಐ.ಎಂ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದ ಅವರು ಕಳೆದ 70 ವುರ್ಷಗಳಿಂದ ಕಾಂಗ್ರೆಸ್ ಹಾಗೂ ಇತ್ತೀಚಿಗೆ ಅಧಿಕಾರದಲ್ಲಿರುವ ಬಿಜೆಪಿ ಕೂಡ ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಹೀಗಾಗಿ ನಾವೆಲ್ಲ ಎಐಎಮ್‌ಐಎಮ್ ಪಕ್ಷಕ್ಕೆ ಸೇರೆ​‍್ಡಯಾಗಿ ಸಂವಿಧಾನವನ್ನು ಹಾಗೂ ಭಾರತವನ್ನು ಉಳಿಸಬೇಕು ಎಂದರು.  

        ಅಥಣಿ ಸೇರಿದಂತೆ ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಎಂ ಐ ಎಂ ಪಕ್ಷದ ಅಭ್ಯರ್ಥಿಗಳು ನ್ಯಾಯವಾದಿ ಪ್ರಮೋದ ಹಿರೇಮನಿ ನೇತೃತ್ವದಲ್ಲಿ ಅಥಣಿ ಪುರಸಭೆಗೆ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದರು.  

       ಎಐಎಮ್‌ಐಎಮ್ ಪಕ್ಷಕ್ಕೆ ಸೇರೆ​‍್ಡಗೊಂಡ ನ್ಯಾಯವಾದಿ ಪ್ರಮೋದ ಹಿರೇಮನಿ ಮಾತನಾಡಿ, ಎ.ಐ.ಎಮ್‌.ಐ.ಎಮ್ ಪಕ್ಷ ಇತ್ತೀಚಿಗೆ ಹುಟ್ಟಿಕೊಂಡ ಪಕ್ಷ ಅಲ್ಲ ಇದು ಸ್ವಾತಂತ್ರ್ಯ ಪೂರ್ವದಿಂದಲೂ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ನಾನು ನನ್ನ ರಾಜಕೀಯ ಭವಿಷ್ಯವನ್ನು ಈ ಪಕ್ಷದ ಮೂಲಕ ರೂಪಿಸಿಕೊಳ್ಳಲು ನಿರ್ಧರಿಸಿದ್ದೇನೆ. ಪುರಸಭಾ ಚುನಾವಣೆಯಲ್ಲಿ ನನ್ನ ಪತ್ನಿ ಸಹಿತ ಅನೇಕ ನನ್ನ ಯುವ ಸ್ನೇಹಿತರು ಈ ಪಕ್ಷ ಸೇರೆ​‍್ಡಗೊಂಡು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದರು. 


ಸುದ್ದಿ ಓದಿ