ಗೋಕಾಕ್

ಪವರ ಸ್ಟಾರ್ ಡಾ.ಪುನೀತ್ ರಾಜಕುಮಾರ ಹುಟ್ಟು ಹಬ್ಬ ಆಚರಣೆ

ಪವರ ಸ್ಟಾರ್ ಡಾ.ಪುನೀತ್ ರಾಜಕುಮಾರ  ಹುಟ್ಟು ಹಬ್ಬ ಆಚರಣೆ

ಘಟಪ್ರಭಾ: ಕರ್ನಾಟಕ ರತ್ನ,ಪವರ ಸ್ಟಾರ್ ಡಾ.ಪುನೀತ್ ರಾಜಕುಮಾರ ಅವರ 48 ನೇಯ ಹುಟ್ಟು ಹಬ್ಬವನ್ನು ಘಟಪ್ರಭಾ ನಗರದಲ್ಲಿ ಅಪ್ಪು ಅಭಿಮಾನಿ ಬಳಗದ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು. ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತಾನಾಡಿದ ರಮೇಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಸುರೇಶ ಸನದಿ  ಪುನೀತ ಅವರು ಸಾರ್ವಜನಿಕ, ಆರೋಗ್ಯ,ಶಿಕ್ಷಣ ಹಾಗೂ ನಾಡು ನುಡಿಯ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು,ಅಲ್ಲದೇ ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುವ ಮೂಲಕ ಯುವ ಜನತೆಗೆ ಆದರ್ಶವಾಗಿದ್ದರು ಈ ದಿನವನ್ನು ನಾವೆಲ್ಲರೂ ಸೇರಿ ಅರ್ಥಪೂರ್ಣವಾಗಿಸಲು ಅಸಹಾಯಕರಿಗೆ ನೆರವಾಗುತ್ತಾ ಅಪ್ಪು ಅವರ ಕನಸನ್ನು ಮುಂದುವರೆಸುತ್ತಾ ಹೋಗೋಣ ಎಂದು ಕರೆ ನೀಡಿದರು ಹಾಗೂ ಇದೆ ಸಂದರ್ಭದಲ್ಲಿ ಸವಿತಾ ಪಟ್ಟಣಶೆಟ್ಟಿ ಅವರ ಮಾಲೀಕತ್ವದ ಸ್ವರ ಸಂಗೀತ ಮೇಲೋಡಿಸವನ್ನು  ಲಾಂಚ್ ಮಾಡಲಾಯಿತು. 

  ಕರ್ನಾಟಕ ರಕ್ಷಣಾ ವೇದಿಕೆ (ಸಂತೋಷ ಅರಳಿಕಟ್ಟಿ ಬಣ)ದ ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ,ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಶಿ,ಕನ್ನಡ ಸೇನೆ ಗೋಕಾಕ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ,ಕರ್ನಾಟಕ ಸಮರ ಸೇನೆ ರಾಜ್ಯ ಉಪಾಧ್ಯಕ್ಷ ಕೆ,ಕೆ ಪಟ್ಟಣಶೆಟ್ಟಿ,ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಬೆಳಗಾವಿ ಜಿಲ್ಲಾಧ್ಯಕ್ಷ  ರಾಜು ದೊಡ್ಡಮನಿ,ಯಲ್ಲಪ್ಪ ಹಂಚಿನಾಳ,ಅಬು ಮುಲ್ಲಾ,ಶಾರುಖ್ ಮುಲ್ಲಾ, ಸಮೀರ ಚಿಕ್ಕೋಡಿ, ಮಲ್ಲಿಕ ಪಾಚಪೂರೆ,ಸತೀಶ್ ರಾಣೆ,ಸಂದೀಪ ಅರಳಿಕಟ್ಟಿ,ಸಾಗರ ಅರಳಿಕಟ್ಟಿ,ಗೋವಿಂದ ಮೇತ್ರಿ,ಚೇತನ ಕರೇವ್ವಗೋಳ ಸೇರಿದಂತೆ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ