ರಸ್ತೆಗಳಲ್ಲಿ ಗುಂಡಿ: ಸವಾರರಿಗೆ ತಪ್ಪದ ಸಂಕಷ್ಟ
ಯರಗಟ್ಟಿ 23: ಪಟ್ಟಣದ ಹೃದಯ ಭಾಗದಲ್ಲಿ ಟೀಚರ್ಸ ಕಾಲೋನಿಯಿಂದ ಬಾಗಲಕೋಟೆ ಸಂಪರ್ಕಿಸುವ ಮುಖ್ಯ ರಸ್ತೆ ಹಲವಾರು ಕಡೆಗಳಲ್ಲಿ ಹೊಂಡ, ಗುಂಡಿಗಳು ಕೂಡಿದ್ದು, ವಾಹನ ಸವಾರರ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
ಈ ಮಾರ್ಗದಲ್ಲಿ ಶಾಲೆ, ಕಾಲೇಜಿಗೆ ತೆರಳುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಸ್ಥಳೀಯ ಉದ್ಯೋಗಸ್ಥರು ನಿತ್ಯ ಸಂಚರಿಸಬೇಕಿದೆ.
ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿರುವುದರಿಂದ ಮಳೆಗಾಲದಲ್ಲಿ ನೀರು ನಿಂತು ಸವಾರರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಬೀಳುವ ಸಾಧ್ಯತೆಯೂ ಹೆಚ್ಚಿದೆ. ಪಟ್ಟಣ ಪಂಚಾಯತ ಆಡಳಿತವು ಕೂಡಲೇ ರಸ್ತೆಯನ್ನು ದುರಸ್ಥಿಪಡಿಸಿ ವ್ಯವಸ್ಥಿತವಾಗಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಜೆಜೆಎಂ ಕಾಮಗಾರಿಯಿಂದ ಹೊಂಡ, ಗುಂಡಿ ಗಳಿಂದ ರಸ್ತೆಯನ್ನು ಸರಿಪಡಿಸಲು ಯೋಜನೆ ರೂಪಿಸಲಾಗಿದೆ. ಮಳೆ ಅನಂತರ ಸಾಕಷ್ಟು ರಸ್ತೆಗಳಿಗೆ ಹಾನಿ ಯಾಗಿದೆ. ಹಂತಹಂತವಾಗಿ ಎಲ್ಲ ವಾರ್ಡ್ ವ್ಯಾಪ್ತಿಗಳಲ್ಲಿ ರಸ್ತೆಗಳನ್ನು ಸರಿಪಡಿಸಲು ವಿಶೇಷ ಕ್ರಮ ವಹಿಸಲಾಗುತ್ತಿದೆ.
ಪ್ರಭಾರಿ ಮುಖ್ಯಾಧಿಕಾರಿ ಪಿ. ಎನ್. ಪಾಟೀಲ