ತಾಳಿಕೋಟಿ

ಅಕ್ರಮ ಗಾಂಜಾ ವಶಕ್ಕೆ

ಅಕ್ರಮ ಗಾಂಜಾ ವಶಕ್ಕೆ


ತಾಳಿಕೋಟೆ14: ತಾಲೂಕಿನ ಚಬನೂರ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸ್‌ರು ಜಮೀನು ಮಾಲಿಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಚಬನೂರ ಗ್ರಾಮದ ಬಸಣ್ಣ ಭೀಮಪ್ಪ ಗಡ್ಡಿಕಾಲ ಎನ್ನುವವರ ಜಮೀನದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದಾರೆ ಎನ್ನುವ ಖಚಿತ ಮಾಹಿತಿ ಮೆರೆಗೆ ಬ.ಬಾಗೇವಾಡಿ ಡಿವಾಯ್‌ಎಸ್‌ಪಿ ಅರುಣಕುಮಾರ ಕೋಳೂರ ಅವರ ನೇತೃತ್ವದಲ್ಲಿ ದಾಳಿ ಮಾಡಿ ಅಕ್ರಮವಾಗಿ ಬೆಳೆದಿದ್ದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ರೈತನು ಹತ್ತಿ ಬೆಳೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಬೆಳೆದಿದ್ದನು. ಸುಮಾರು 23.4 ಕೆಜಿ ಹಸಿ ಗಾಂಜಾ ಹಾಗೂ ರೈತ ಬಸಣ್ಣ ಭೀಮಪ್ಪ ಗಡ್ಡಿಕಾಲನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಧರ್ಭದಲ್ಲಿ ಕಂದಾಯ ನೀರಿಕ್ಷಕ ಜಗದೀಶ ಹಾರವಾಳ, ಗ್ರಾಮ ಸಹಾಯಕ ಭೀಮಣ್ಣ ಕಕ್ಕೇರಿ, ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ