ತಾಳಿಕೋಟಿ

ನ್ಯಾಯ ಸಿಗದೆ ಬೀದಿ ಪಾಲಾದ ಬಡ ಕುಟುಂಬ

ನ್ಯಾಯ ಸಿಗದೆ ಬೀದಿ ಪಾಲಾದ ಬಡ ಕುಟುಂಬ

ತಾಳಿಕೋಟಿ: 47ವರ್ಷಗಳಿಂದ ನಮ್ಮ ಹಿರಿಯರಿಂದ ಇಲ್ಲಿಯತನಕ ನನ್ನ ಈ ವರ್ಕಶಾಫ್ ನಡೆಸುತ್ತ ಬಂದಿರುವೆ, ಇಗ “ಏಕಾಏಕಿ ಪುರಸಭೆಯವರು ರಸ್ತೆ ಅಗಲಿಕರಣ ಮಾಡಬೇಕಂತ ಹೇಳಿ ನನ್ನ ವರ್ಕಶಾಫ್‌ಅನ್ನೆ ಕೆಡವ್ಯಾರಿ ನನ್ನ ಜೀವನವೇ ಇದರ ಮ್ಯಾಗೈತ್ರೀ ನಾನು ನನ್ನ ಹೆಂಡತಿ ಮಕ್ಕಳು ಕೂಡಿ ವಿಷ ತೋಗೋಳೋದು ಬಿಟ್ರೇ ಬೇರೆ ದಾರಿನೇ ಇಲ್ಲಾರಿ ಸಾರ್‌” ಈದು ಯಾವುದೋ ಸಿನಿಮಾ ಅಥವಾ ದಾರಾವಾಹಿಯ ಡೈಲಾಗ ಅಲ್ಲ, ತನ್ನ ಜೀವನಾಧಾರ ವಾಗಿರುವ ವರ್ಕಶಾಫ್ ಅನ್ನು ಕಳೆದುಕೊಂಡು ಬೀದಿಪಾಲಾಗಿರುವ ಬಡಪಾಯಿ ಸಚಿನ್ ಬುಸಾರೇಯ ಕರುಣಾಜನಕ ಕಥೆ ಪಟ್ಟಣದಲ್ಲಿ ಡೋಣಿ ನದಿಗೆ ಹೋಗುವ ದಾರಿಯ ಪಕ್ಕದಲ್ಲಿರುವ ಸಿ.ಟಿ.ಎಸ್‌.ಸಂ. 5/ಬಿ/ಎಲ್‌/16 ರಲ್ಲಿ ಸುಮಾರು 47ವರ್ಷಗಳಿಂದ ನಡೆಸಿಕೊಂಡು ಬರುತ್ತೀರುವ ಬುಸಾರೆ ಮ್ಯಾಕ್ಯಾನರಿ ಸ್ಟೋರ್ ಆಂಡ ಇಂಜಿನಿಯರಿಂಗ್ ವರ್ಕಶಾಫ್ ಈಗ ಪುರಸಭೆಯಿಂದ ರಸ್ತೆ ಅಗಲಿಕರಣ ಕಾರ್ಯಾಚರಣೆ ಕಾರಣದಿಂದಾಗಿ ಭಾಗಶಃ ತೇರುವುಗೊಂಡಿದೆ.  

ಈ ಪ್ರಕರಣ ದಾವಾ ಸಂ. 177/22ರ ಮುದ್ದೇಬಿಹಾಳ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದು ಇಷ್ಟೇಲ್ಲವಿದ್ದರು ಮಾಲೀಕ ಸಚೀನ ಬುಸಾರೆ ಹೆಳುವ ಪ್ರಕಾರ ಸ್ಥಳಿಯ ಆಡಳಿತ ಯಾವುದೆ ಲಿಖಿತ ನೋಟಿಸು ನೀಡದೆ, ಬಲಪ್ರಯೋಗದಿಂದ ಅವರ ವರ್ಕಶಾಫ್ ಅನ್ನು ಗುರಿಯಾಗಿಸಿ ತೆರವುಗೋಳಿಸುತ್ತಿದ್ದಾರೆ ನನ್ನಲ್ಲಿರುವ ಆಸ್ತಿ ದಾಖಲೆ ಪತ್ರ ನ್ಯಾಯಾಲಯದಲ್ಲಿರುವ ಪ್ರಕರಣದ ಪತ್ರಗಳು ಇವು ಯಾವುದನ್ನು ಅಧಿಕಾರಿಗಳು ಪರಿಗಣಿಸುತ್ತಿಲ್ಲ ಎಂಬುವುದು ಸಚಿನರ ಅಳಲಾಗಿದೆ. ನೂತನ ಸೇತುವೆಗೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗುತ್ತೀರುವ ರಸ್ತೆಗೆ ಅವರು ತಮ್ಮ ವ್ಯಾಪ್ತಿಯ ಜಾಗೇಯಲ್ಲಿ 5ಅಡಿಯವರೆ ಸ್ವಂತಃ ಹಿಂದೆ ಸರಿಸಿಕೊಳ್ಳಲು ಸಿದ್ಧರಿದ್ದರು ಈಡಿ ವರ್ಕಶಾಫ್ ಅನ್ನು ಗುರಿಯಾಗಿಸಿ ಅಲ್ಲಿ ಏನು ಮಾಡದಿರುವಂತಹ ಸ್ಥಿತಿ ನಿರ್ಮಿಸಿದ್ಧಾರೆ. ಎಂದು ಅವರು ತಿಳಿಸುತ್ತಾರೆ. ಇಡಿ ಕುಟುಂಬಕ್ಕೆ ಎಕೈಕ ಆದಾಯದ ಮೂಲವಾಗಿರುವ ವರ್ಕಶಾಫ್‌ವೆ ಇಲ್ಲವಾದಾಗ ಮುಂದೆ ಮಾಡುವುದಾದರು ಏನು? ಎಂಬ ದೊಡ್ಢ ಪ್ರಶ್ನೆ ತನ್ನ ಮುಂದೆ ಇದೆ. ಯಾರಿಗೆ ಹೇಳಿದರು ನ್ಯಾಯ ಸಿಗುತ್ತಿಲ್ಲ ವೆಂದು ತಿವ್ರ ಒತ್ತಡ ಹಾಗೂ ಹತಾಶೆಗೆ ಒಳಗಾಗಿ ಮಾನ್ಯ ರಾಜ್ಯಪಾಲರಲ್ಲಿ ದಯಾಮರಣ ಕ್ಕೆ ವಿನಂತಿಸಿಕೊಳ್ಳುತ್ತೀದ್ದೇನೆ ಇಲ್ಲದಿದ್ದರೆ ಸಾಮೂಹಿಕ ವಿಷಪಾಯಸಣ ಮಾಡುತ್ತೇನೆ ಎಂದು ಹೇಳುವಾಗ ಎಂತಹ ಕಲ್ಲು ಹೃದಯವು ರೋಧಿಸುತ್ತದೆ.  

ಇದು ಇಂದಿನ ನಮ್ಮ ವ್ಯವಸ್ಥೆ ಯಾವ ರೀತಿಯಾಗಿ ಹಾಳಾಗಿ ಹೊಗಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿ. ಶ್ರೀಮಂತರಿಗೊಂದು ನ್ಯಾಯ ಬಡವರಿಗೊಂದು ನ್ಯಾಯ, ಬಡವರಿಗಂತು ಇಲ್ಲಿ ನ್ಯಾಯವೇ ಸಿಗುವುದಿಲ್ಲ ಈ ಕಾರಣಕ್ಕಾಗಿಯೆ ಬಸವಣ್ಣ ಹೇಳಿದ್ದು “ಉಳ್ಳುವವರು ಶಿವಾಲಯ ಕಟ್ಟುವವರಯ್ಯ ನಾನೇನು ಮಾಡಲಿ ಬಡವಾ” ದುಡ್ಡು ಇದ್ದವರು ಈ ಸಮಾಜದಲ್ಲಿ ಎನು ಬೇಕಾದರು ಮಾಡಬಹುದು ಆದರೆ ಬಡವ ದುರ್ಬಲ ಅಸಾಹಾಯಕ ಏನು ಮಾಡಲು ಸಾಧ್ಯವಿಲ್ಲ ಈ ಸಂತ್ರಸ್ತರಾಗಿ ನ್ಯಾಯ ಸಿಗಲೆಂಬುದೆ ನಮ್ಮ ಆಷಯವಾಗಿದೆ ಮಾನ್ಯ ಜಿಲ್ಲಾಧಿಕಾರಿಗಳು ಈ ಗಂಭಿರ ಸಮಸ್ಯಯನ್ನು ಮಾನವಿಯತೆಯ ಆಧಾರದಲ್ಲಿ ಪರಿಗಣಿಸಿ ಸಚೀನ ಬುಸಾರೆಗೆ ನ್ಯಾಯ ದೊರಕಿಸಿಕೊಟ್ಟು ಅವರು ಮತ್ತೇ ಅದೇ ಸ್ಥಳದಲ್ಲಿ ವರ್ಕಶಾಫ್‌ಅನ್ನು ಮುಂದುವರಿಸಿಕೊಂಡು ಹೊಗಲು ಅನುಕೂಲ ಮಾಡಿಕೊಡಬೇಕಾಗಿದೆ. 


ಸುದ್ದಿ ಓದಿ