ಗ್ರಾ ಪಂ. ಚುನಾವಣೆ ಪ್ರಚಾರಾ ರಾಜಕೀಯ ಪಕ್ಷಗಳ ಬಾವುಟ, ಚಿಹ್ನೆ ಬಳಸುವಂತಿಲ್ಲ: ಜಿಲ್ಲಾಧಿಕಾರಿ ಎಚ್ಚರಿಕೆ
ಕಾರವಾರ 15: ಗ್ರಾಮಪಂಚಾಯತ ಚುನಾವಣೆಯು ಪಕ್ಷರಹಿತವಾಗಿದ್ದು, ಈ ಚುನಾವಣೆ ಸಂದಂರ್ಭದಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪವನ್ನು ತಡೆಗಟ್ಟಲು ರಾಜ್ಯ ಚುನಾವಣಾ ಆಯೋಗವು ವಿವಿಧ ನಿದರ್ೇಶನಗಳನ್ನು ಜಾರಿ ಗೊಳಿಸಿದೆ. ಹಾಗಾಗಿ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಸೂಚನೆಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಎಚ್ಚರಿಸಿದ್ದಾರೆ.
ಈ ನಿದರ್ೇಶನಗಳ್ವನಯ ರಾಜಕೀಯ ಪಕ್ಷಗಳು ಸಭೆ, ಸಮಾರಂಭಗಳನ್ನು ಏರ್ಪಡಿಸಿ, ವೇದಿಕೆಯ ಮೇಲೆ ಪಕ್ಷದ ಬಾವುಟ, ಬ್ಯಾನರ್ಗಳನ್ನು ಬಳಸುವಂತಿಲ್ಲ, ಸ್ಪಧರ್ಿಸುವ ಅಭ್ಯಥರ್ಿಗಳನ್ನು ತಮ್ಮ ಪಕ್ಷದ, ಬೆಂಬಲಿತ ಅಭ್ಯಥರ್ಿ ಎಂದು ಪರಿಚಯಿಸುವುದು ಹಾಗೂ ಅವರ ಪರವಾಗಿ ಮತ ನೀಡಲು ಮತದಾರರನ್ನು ಕೋರುವಂತಿಲ್ಲಾ, ಚುನಾವಣೆಗೆ ಸ್ಪಧರ್ಿಸಿರುವ ಅಭ್ಯಥರ್ಿಗಳು, ರಾಜಕೀಯ ಮುಂಖಡರ ಭಾವಚಿತ್ರ, ಪಕ್ಷದ ಚಿಹ್ನೆ ಇರುವ ಕರಪತ್ರಗಳನ್ನು ಮುದ್ರಿಸುವುದು ಅಥವಾ ಹಂಚುವುದು ಮಾಡುವಂತಿಲ್ಲಾ, ರಾಜಕೀಯ ಮುಂಖಡರ ಭಾವಚಿತ್ರ ರಾಜಕೀಯ ಪಕ್ಷಗಳ ಚಿಹ್ನೆ ಇರುವ ಕರಪತ್ರಗಳು, ಕಟೌಟ್ಗಳು, ಬ್ಯಾನರ್ ಮತ್ತು ಬಂಟಿಂಗ್ಗಳ ಮೂಲಕ ಪ್ರಚಾರ ಮಡುವಂತಿಲ್ಲ, ಚುನವಣೆಗೆ ಸ್ಪಧರ್ಿಸಿರುವ ಅಭ್ಯಥರ್ಿಗಳು ಟಿ.ವಿ. ಮಾಧ್ಯಮಗಳು ಪತ್ರಿಕೆಗಳ ಮೂಲಕ ರಾಜಕೀಯ ಮುಂಖಡರ ಭಾವಚಿತ್ರ ಮತ್ತ ಪಕ್ಷಗಳ ಚಿಹ್ನೆಗಳನ್ನು ಬಳಸಿ ಜಾಹೀರಾತು ನೀಡುವಂತಿಲ್ಲಾ ಎಂದು ಅವರು ಮಹಿತಿ ನೀಡಿದ್ದಾರೆ.
ಈ ಚುನಾವಣೆ ಸಂದಂರ್ಭದಲ್ಲಿ ಚುನಾವಣಾ ಆಯೋಗದ ಈ ಮೇಲ್ಕಂಡ ನಿದರ್ೇಶನಗಳು ಉಲ್ಲಂಘನೇಯಾಗಿರುವುದು ಕಂಡು ಬಂದಲ್ಲಿ ಅಂತಹ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಅಂತವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ನಿದರ್ೇಶನ ನೀಡಲಾಗುವುದೆಂದು ಜಿಲ್ಲಾಧಿಕಾರಿ ಹೇಳಿದ್ದಾರೆ