ಕಾಂಗ್ರೆಸ್ ರಾಜಕೀಯ ದುರುದ್ದೇಶ ಸರಿಯಲ್ಲ: ಬೊಮ್ಮಾಯಿ
ಬ್ಯಾಡಗಿ 23: ಸಕರ್ಾರದ ವಿರುದ್ಧ ಹಕ್ಕುಚ್ಯುತಿ ಮಂಡನೆ ವಿಚಾರ ಕೈಗೆತ್ತಿಕೊಂಡಿರುವುದು ಕಾಂಗ್ರೆಸ್ ರಾಜಕೀಯ ದುರುದ್ದೇಶ ಸರಿಯಲ್ಲ ಕೊರೊನಾ ವಿಚಾರದಲ್ಲಿ ನಿತ್ಯವೂ ಕ್ಷಣಕ್ಷಣದ ಎಲ್ಲಾ ಮಾಹಿತಿಯನ್ನು ಆನ್ಲೈನ್ ಮೂಲಕ ನೀಡುತ್ತಿದ್ದೇವೆ, ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಇಂತಹ ಹೇಳಿಕೆ ನೀಡಲಾಗುತ್ತಿದೆ ಎಂದು ಗೃಹ ಸಚಿವ ಬೊಮ್ಮಾಯಿ ತಿರುಗೇಟು ನೀಡಿದರು. ಸಕರ್ಾರದ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಕಾಂಗ್ರೆಸ್ ಮುಂದಾಗಿರುವ ಕುರಿತು ಶನಿವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಿಲ್ಲಾಧಿಕಾರಿಗಳು ಆನ್ಲೈನ್ ಮೂಲಕ ಪ್ರತಿಯೊಂದು ಡಾಟಾ ಅಪಡೇಟ್ ಆಗುತ್ತಿದೆ, ಆಧಾರ ನಂಬರ್ ಇಲ್ಲದೇ ಯಾವುದೇ ರೋಗಿಗೂ ಉಪಚಾರ ನೀಡಲಾಗುತ್ತಿಲ್ಲ ಎಂದರು.
ವಿಚಾರ ಕಾಂಗ್ರೆಸ್ಗೂ ಗೊತ್ತಿದೆ: ಕಾಂಗ್ರೆಸ್ ಮುಖಂಡರಿಗೂ ನಿತ್ಯವೂ ಮಾಹಿತಿ ಲಭ್ಯವಾಗುತ್ತಿದೆ, ವಿಚಾರದ ಬಗ್ಗೆ ಎಲ್ಲವೂ ತಿಳಿದುಕೊಂಡಿದ್ದಾರೆ, ಆದರೆ ರಾಜಕೀಯ ಉದ್ದೇಶವನ್ನಿಟ್ಟುಕೊಂಡು ಇಂತ ಹ ಹೇಳಿಕೆಗಳನ್ನು ನೀಡುವುದನ್ನು ಕಾಂಗ್ರೆಸ್ ನಿಲ್ಲಿಸುವ ಮೂಲಕ ರಾಜ್ಯದ ಆರೂವರೆ ಕೋಟಿ ಜನರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಸಕರ್ಾರದೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು.ಮಕ್ಕಳಲ್ಲಿ ಪಾಸಿಟಿವ್ ತಜ್ಞರ ವರದಿ ಪಡೆವೆ: ಕಳೆದ ಎರಡೂವರೆ ತಿಂಗಳಲ್ಲಿ ಜಿಲ್ಲೆಯ 300 ಕ್ಕೂ ಹೆಚ್ಚು ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಬಂದಿದೆ, ಅದರಲ್ಲಿ 15 ವರ್ಷದೊಳಗಿನ ಮಕ್ಕಳು 150 ಇನ್ನುಳಿ ದವರು 10 ವರ್ಷದೊಳಗಿನವರಿದ್ದಾರೆ, ಅದನ್ನು ಈಗಲೇ ಮೂರನೇ ಅಲೆ ಎಂದು ಭಾವಿಸಲು ಸಾಧ್ಯ ವಿಲ್ಲ ತಜ್ಞ ವೈದ್ಯರ ಅಭಿಪ್ರಾಯ ಪಡೆದುಕೊಂಡ ಬಳಿಕ ಮಾತನಾಡುತ್ತೇನೆ ಎಂದರು