ಇಂಡಿ

ಮಕ್ಕಳಿಗೆ ಕಡ್ಡಾಯವಾಗಿ ಪೊಲೀಯೋ ಹಾಕಿಸಿ: ಬಿದರಕೋಟಿ

ಮಕ್ಕಳಿಗೆ ಕಡ್ಡಾಯವಾಗಿ ಪೊಲೀಯೋ ಹಾಕಿಸಿ: ಬಿದರಕೋಟಿ
ನಗರದ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಪೊಲೀಯೊ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಇಂಡಿ 2: ದೇಶದ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪೊಲೀಯೋ ಹನಿ ಹಾಕಿಸಿ ಅಂಗವೈಕಲ್ಯ ಕೊನೆಗಾಣಿಸಿ ಎಂದು ತಾಲೂಕಾ ಪಂಚಾಯತ್ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ ಹೇಳಿದರು.

ಅವರು ನಗರದ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಪಲ್ಸ ಪೊಲೀಯೋ ಕಾರ್ಯಕ್ರಮದ ಪ್ರಯುಕ್ತ ಮಗುವಿಗೆ ಪೊಲೀಯೋ ಹನಿ ಹಾಕಿ ನಂತರ ಮಾತನಾಡಿದರು.

ತಾಲೂಕ ಆರೋಗ್ಯ ಅಧಿಕಾರಿ ಡಾ. ಅರ್ಚನಾ ಕುಲಕರ್ಣಿ, ಸುನಂದಾ ಅಂಬಲಗಿ, ಡಿ.ಎಸ್.ಕರಜಗಿ, ವಿ.ಎಸ್.ಹೊಸಮನಿ, ವಿಶ್ವನಾಥ ತೆನ್ನೆಳ್ಳಿ, ಪ್ರಶಾಂತ ಶಹಾಪೂರ, ಮತ್ತು ನಗರದ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ