ಈದ್ ಮಿಲಾದ, ಗೌರಿಗಣೇಶ ಹಬ್ಬದ ಪ್ರಯುಕ್ತ ಪತಸಂಚಲನ
ಜಮಖಂಡಿ 11: ಈದ್ ಮಿಲಾದ, ಗೌರಿಗಣೇಶ ಹಬ್ಬದ ಪ್ರಯುಕ್ತ ಪೋಲಿಸ್ ಇಲಾಖೆಯಿಂದ ಮಳೆಯಲ್ಲಿ ಪತಸಂಚಲನ ನಡೆಸಿ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತೆಯಿಂದ ಜನತೆಯಲ್ಲಿ ಜಾಗೃತಿ ಮೂಡಿಸಿದರು.
ನಗರದ ಎ,ಜಿ,ದೇಸಾಯಿ ಸರ್ಕಲ್ದಿಂದ ಪ್ರಾರಗೊಂಡ ಪತಸಂಚಲನ ಪ್ರಮುಖ ರಸ್ತೆಯ ಮೂಲಕ ಸಂಚರಿಸಿ, ಅಶೋಕ ಸರ್ಕಲ್, ಅರ್ಬನ್ ಬ್ಯಾಂಕ್ ಸರ್ಕಲ್, ಹನುಮಾನ ಚೌಕ್, ಹೊಕ್ಕಲಬಾವಿ, ಥೇಟರ್ ಚೌಕ್ ಹೀಗೆ ಪ್ರಮುಖ ರಸ್ತೆಯಲ್ಲಿ ಸಂಚರಿಸುವ ಸಮಯಲ್ಲಿ ಮೆಳೆಯ ಪ್ರಾರಂಭವಾಯಿತು. ಮಳೆಯನ್ನು ಲೆಕ್ಕಿಸದೆ ಪೋಲಿಸರು ಪಂತಸಂಚಲನ ಮಾಡಿದರು.
ಇದೇ ಸಂದರ್ಭದಲ್ಲಿ ಡಿಎಸ್ಪಿ, ಶಾಂತವೀರ ಈ, ಸಿಪಿಐ, ಮಲ್ಲಪ್ಪ ಮಡ್ಡಿ, ಶಹರ ಠಾಣೆಯ ಪಿಎಸ್ಐ,ಅನೀಲ ಕುಂಬಾರ ಸೇರಿದಂತೆ ಮಹಿಳಾ ಸಿಬ್ಬಂದಿಗಳು, ಪೋಲಿಸ್ ಸಿಬ್ಬಂದಿಗಳು, ಹೋಮ್ ಗಾರ್ಡ ಸಿಬ್ಬಂದಿಗಳು ಪತಸಂಚಲನದಲ್ಲಿ ಭಾಗಿಯಾಗಿದ್ದರು.