ಹೆಲೈಟ್ ಧರಿಸದ್ದಕ್ಕೆ ತಾಯಿ, ಮಗನ ಮೇಲೆ ಪೊಲೀಸರ ಹಲ್ಲೆ: ಆರೋಪ
ಮಾಂಜರಿ 28: ಹೆಲೈಟ್ ಹಾಕಿಲ್ಲ ಎಂಬ ಕಾರಣಕ್ಕೆ ತಾಯಿ ಮತ್ತು ಮಗನ ಮೇಲೆ ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸರು ಪೊಲೀಸ್ ಠಾಣೆ ಎದುರಿನಲ್ಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಾಂಗಲಿಯಿಂದ ಬೈಕ್ ಮೇಲೆ ಆಗಮಿಸುತ್ತಿದ್ದ ಹೃಷಿಕೇಶ ಲಿಂಬಿಗಿಡದ ಹಾಗೂ ಅವರ ತಾಯಿ ಸುಶೀಲಾ ಲಿಂಬಿಗಿಡದ ಅವರ ಬೈಕ್ ತಡೆದ ಪೊಲೀಸರು ಹೆಲ್ಕೆಟ್ ಹಾಕದ್ದಕ್ಕೆ ದಂಡ ಕೊಡುವಂತೆ ಕೇಳಿದ್ದಾರೆ. ಆವಾಗ ಹೃಷಿಕೇಶ, ಆತನ ತಾಯಿಗೆ ಅವಾಚ್ಯ ಶಬ್ದದಿಂದ ಪೊಲೀಸರು ನಿಂದಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಹಾಗೂ ತಾಯಿ-ಮಗನ ಮಧ್ಯದಲ್ಲಿ ವಾದ ವಿವಾದ ನಡೆದಿದೆ.
ಪೊಲೀಸರು ಮನ ಬಂದಂತೆ ಥಳಿಸಿದ್ದಾರೆ ಎಂದು ಹೃಷಿಕೇಶ ಹಾಗೂ ಅವರ ತಾಯಿ ಸುಶೀಲಾ ಆರೋಪಿಸಿದ್ದಾರೆ. ತನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಮಗನನ್ನು ಬಿಡಿಸಿಕೊಳ್ಳಲು ಬಂದ ತನಗೂ ಥಳಿಸಿದ್ದಾರೆ ಎಂದು ಸುಶೀಲಾ ಆರೋಪಿಸಿದ್ದಾರೆ. ಈ ಘಟನೆಯಿಂದ ಯುವಕನ ಬಿಪಿ ಹೆಚ್ಚಾಗಿದೆ. ಪೊಲೀಸರೆ ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ ಎಂದು ಯುವಕ ಆರೋಪಿಸಿದ್ದಾರೆ. ನಂತರ ಪೊಲೀಸರೆ ಯುವಕನಿಗೆ ಟೀ ಶರ್ಟ್ ಕೊಡಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದೀಗ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.