ಕಾರವಾರ

ಬನವಾಸಿ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ

ಬನವಾಸಿ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ

ಬನವಾಸಿ 29: ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು 14 ದಿನಗಳವರೆಗೆ ಲಾಕ್‌ಡೌನ್ ಆದೇಶ ಹೊರಡಿಸಿರುವುದರಿಂದ ಬನವಾಸಿ ಪಟ್ಟಣದಲ್ಲಿ ಪೊಲೀಸ್ ಇಲಾಖೆಯೂ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಪಟ್ಟಣದಲ್ಲಿ ಅನವಶ್ಯಕವಾಗಿ ಓಡಾಡಿ ನಿಯಾಮ ಉಲ್ಲಂಘಿಸಿದವರಿಗೆ ಪಿಎಸ್‌ಐ ಹನುಮಂತ ಬಿರಾದರ ದಂಡ ವಿಧಿಸುವುದರ ಜೊತೆಗೆ ಲಾಠಿ ರುಚಿಯನ್ನು ನೀಡಿದರು. ಮೆಡಿಕಲ್ ಅಂಗಡಿಯನ್ನು ಹೊರತು ಪಡಿಸಿ ಬೇರೆ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. 


ಸುದ್ದಿ ಓದಿ