ಅಥಣಿ

ಅನ್ನಪೂರ್ಣ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಪ್ರತಿಜ್ಞಾ ವಿಧಿ, ಪ್ರಮಾಣ ವಚನ

ಅನ್ನಪೂರ್ಣ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಪ್ರತಿಜ್ಞಾ ವಿಧಿ, ಪ್ರಮಾಣ ವಚನ

ಅಥಣಿ 20: ಇಲ್ಲಿನ ಎ ಎಸ್ ಪಾಂಗಿ ಮೆಡಿಕಲ್ ಸರ್ವಿಸಿಸ್ ಮತ್ತು ರಿಸರ್ಚ್‌ ಫೌಂಡೇಶನ್ ಇದರ ಅನ್ನಪೂರ್ಣ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಶುಶ್ರೂಷಕರ ದಿನಾಚರಣೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ಪ್ರಮಾಣ ವಚನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.  

ದೀಪ ಬೆಳಗಿಸುವದರೊಂದಿಗೆ ಸಮಾರಂಭ ಆರಂಭಗೊಂಡಿತು. ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಮುಖ್ಯ ಅತಿಥಿಗಳಾಗಿ ತಾಲೂಕಾ ವೈದ್ಯಾದಿಕಾರಿ ಡಾ.  ಬಸಗೌಡ ಕಾಗೆ ಇವರು ಆಗಮಿಸಿದ್ದರು   ಈ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ದೀಪ ಬೆಳಗಿಸಿ ನರ್ಸಿಂಗ್  ವೃತ್ತಿ ಕುರಿತು ಪ್ರಮಾಣ ವಚನ ಸ್ವೀಕರಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಎಂ ಎ ಶಿವಾಪುರ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಮಹಾವಿದ್ಯಾಲಯದ ಧೇಯ್ಯೋದ್ದೇಶಗಳನ್ನು ವಿವರಿಸುತ್ತ ಸಂಸ್ಥೆಯ ಮುಂಬರುವ ಯೋಜನೆಗಳನ್ನು ಹೇಳಿದರು. ಸುತ್ತ ಮುತ್ತಲಿನ ನರ್ಸಿಂಗ್ ಮಹಾವಿದ್ಯಾಲಯಗಳಲ್ಲೇ ಅನ್ನಪೂರ್ಣ ನರ್ಸಿಂಗ್ ಮಹಾವಿದ್ಯಾಲಯದ ಫಲಿತಾಂಶ ಅತ್ತ್ಯುತ್ತಮವಾಗಿದೆ ಎಂದು ಹೇಳಿದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಬಸಗೌಡ ಕಾಗೆ ಅವರು ಮಾತನಾಡುತ್ತ ನರ್ಸಿಂಗ್ ವಿದ್ಯೆಯ ಮಹತ್ವವನ್ನು ವಿವರಿಸುತ್ತ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡಬೇಕು ಎಂದು ಹೇಳಿದರು.  

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ಎ ಎ ಪಾಂಗಿ ಅವರು ಮಾತನಾಡುತ್ತ ರೋಗಿಗಳು ಗುಣಮುಖರಾಗಲು ವೈದ್ಯರಷ್ಟೇ ಶುಶ್ರೂಷಕರೂ ಮುಖ್ಯ ಎಂದು ಹೇಳಿದರು.  

ಸಂಸ್ಥೆಯ ನಿರ್ದೇಶಕ ಡಾ. ರವಿ ಪಾಂಗಿ ಅವರು ಮಾತನಾಡುತ್ತ ಕೋವಿಡ್ ಸಮಯದಲ್ಲಿ ಅಥಣಿ ತಾಲೂಕಿನಲ್ಲಿ ತಮ್ಮ ಅನ್ನಪೂರ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಒಂದೇ ಕೋವಿಡ್ ಆಸ್ಪತ್ರೆಯಾಗಿತ್ತು. ಆ ಸಂದರ್ಭದಲ್ಲಿ ಅಥಣಿ ತಾಲೂಕಿನಲ್ಲಿ ಮಾತ್ರವಲ್ಲದೆ ಸುತ್ತ ಮುತ್ತಲಿನಲ್ಲಿ ಕೂಡ  ಅನುಭವಿಕ ಶುಶ್ರೂಷಕರ ಕೊರತೆ ಕಂಡುಬಂತು, ಇದರಿಂದ ಸಾಕಷ್ಟು ಸಮಸ್ಯೆಯಾಯಿತು. ಮುಂದೆ ಹೀಗಾಗಬಾರದೆಂದು ನರ್ಸಿಂಗ್ ಮಹಾವಿದ್ಯಾಲಯ ಪ್ರಾರಂಭ ಮಾಡಲು ಪ್ರೇರಣೆಯಾಯಿತು ಎಂದು ಹೇಳುತ್ತಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಸಂಸ್ಥೆ ಸಿದ್ದವಿದೆ ಎಂದು ಹೇಳಿದರು.        ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಪೂರ್ಣಿಮಾ ಪಾಂಗಿ, ವೈದ್ಯರಾದ ಡಾ. ದೀಪಾ ಪಾಂಗಿ, ಡಾ. ಬಾಹುಬಲಿ ಅಸ್ಕಿ, ಡಾ. ಅರುಣಾ ಅಸ್ಕಿ, ಪ್ರೋ. ಡಾ ಪ್ರವೀಣ ಜೇಡರ, ಪ್ರೋ ಸುಪ್ರಿಯಾ, ಪ್ರೋ. ಸುಶೀಲಾ, ಪ್ರೋ. ಸರಸ್ವತಿ, ಪ್ರೋ. ಪೂರ್ಣಿಮಾ, ಗ್ರಂಥಪಾಲಕರಾದ ಈರಣ್ಣ ಗದಗಿನಮಠ,  ಕ್ಲರ್ಕ್‌ ನಿಂಗಪ್ಪ ರೂಗಿ, ಪ್ರಥಮ ವರ್ಷದ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಪ್ರೋ. ಅಸ್ಲಮ್ ಪಟ್ಟದಕಲ್ ಸ್ವಾಗತಿಸಿದರು. ಪ್ರೋ. ಕಿರಣ ನಿರೂಪಣೆ ಮಾಡಿದರು. ಪ್ರೋ. ಅಮಸಿದ್ದ ಮೆಂಡಿಗೇರಿ ಅವರು ವಾರ್ಷಿಕ ಕ್ರೀಡಾಕೂಟದ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ನಡೆಸಿಕೊಟ್ಟರು. ಮುಖ್ಯ ಅತಿಥಿಗಳು ಹಾಗೂ ಅಧ್ಯಕ್ಷರು ಬಹುಮಾನ ವಿತರಿಸಿದರು. 


ಸುದ್ದಿ ಓದಿ