ಶಿಗ್ಗಾವ್

ಮಾರಣಾಂತಿಕ ಹಲ್ಲೆಗೊಳಗಾದ ಯುವತಿ: ಪರಿಹಾರಕ್ಕೆ ಮನವಿ

ಮಾರಣಾಂತಿಕ ಹಲ್ಲೆಗೊಳಗಾದ ಯುವತಿ: ಪರಿಹಾರಕ್ಕೆ ಮನವಿ

ಶಿಗ್ಗಾವಿ 06: ಇತ್ತೀಚೆಗೆ ಶಿಗ್ಗಾವಿ ಪಟ್ಟಣದ ಹೊರವಲಯದಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ತಾಲೂಕಿನ ಬನ್ನೂರ ಗ್ರಾಮದ ಯುವತಿ ಗೀತಾ ಅರ್ಜುನಗೌಡ ಹೊನ್ನಗೌಡ್ರ ಅವಳಿಗೆ ಸೂಕ್ತ ರಕ್ಷಣೆ ಹಾಗೂ ಪರಿಹಾರ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ (ಡಾ.ಅಂಬೇಡ್ಕರ್ ವಾದ) ರಾಜ್ಯ ಸಮಿತಿ ಸದಸ್ಯರು, ಜಯ ಕರ್ನಾಟಕ ಸಂಘಟನೆಯವರು, ಕದಂಬ ಕರ್ನಾಟಕ ರಕ್ಷಣಾ ವೇದಿಕೆ, ಮಾನವ ಹಕ್ಕುಗಳ ರಕ್ಷಣಾ ಸಮಿತಿ ಹಾಗೂ ಭೋವಿ ಸಮಾಜದ ಮುಖಂಡರು ತಹಶೀಲ್ದಾರ ಮಂಜುನಾಥ ಮುನ್ನೋಳಿ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು. 

ಶಿಗ್ಗಾವಿ ತಾಲೂಕಿನ ಬನ್ನೂರ ಗ್ರಾಮದ ಅರ್ಜುನಗೌಡ 2016 ರಲ್ಲಿ ದಲಿತ ಯುವತಿ ಗೀತಾಳನ್ನು ಪ್ರೀತಿಸಿ ವಿವಾಹವಾಗಿದ್ದ, ನಂತರ ಅಂತರ್ಜಾತಿ ವಿವಾಹದಿಂದ ಸರ್ಕಾರದಎಲ್ಲ ಸವಲತ್ತುಗಳನ್ನು ಪಡೆದುಕೊಂಡಿದ್ದಾನೆ. ನಂತರದ ದಿನಗಳಲ್ಲಿ ಅರ್ಜುನಗೌಡ ಕುಟುಂಬಸ್ಥರ ಮಾತು ಕೇಳಿ ಬೇರೆ ವಿವಾಹವಾಗುವ ಉದ್ದೇಶದಿಂದ ಗೀತಾಳಿಗೆ ಮಾನಸಿಕ ಹಿಂಸೆ, ಜಾತಿ ನಿಂದನೆ ಮಾಡಿ ಕಿರುಕುಳ  ನೀಡುತ್ತಿದ್ದ. ನಂತರ ಕೊಲೆ ಮಾಡುವ ಉದ್ದೇಶದಿಂದತನ್ನ ಸಹಚರರೊಂದಿಗೆ ಸೆ.16 ರಂದು ಗೀತಾಳ ಕಣ್ಣಿಗೆಕಾರದ ಪುಡಿ ಎರಚಿ ಮಾರಣಾಂತಿಕವಾಗಿ ಥಳಿಸಿ ಸತ್ತಿದ್ದಾಳೆ ಎಂದು ತಿಳಿದು ಕಾರಿನಡಿಕ್ಕಿಯಲ್ಲಿ ಹಾಕಿಕೊಂಡುದಾಂಡೇಲಿ ಹತ್ತಿರದ ಕರ್ಕಿಹಳ್ಳದಲ್ಲಿ ಬಿಸಾಕಿ ಹೋಗಿದ್ದಾರೆ. ಸುಮಾರು ಹೊತ್ತಿನ ನಂತರ ಗೀತಾಳಿಗೆ ಪ್ರಜ್ಞೆ ಬಂದು ಸಾರ್ವಜನಿಕರ ಸಹಾಯದಿಂದಆಸ್ಪತ್ರೆಯಲ್ಲಿಚಿಕಿತ್ಸೆಗೆ ದಾಖಲಾಗಿದ್ದಾಳೆ.ಈ ಕುರಿತುದಾಂಡೇಲಿ ಪೊಲೀಸ್‌ಠಾಣೆಯಲ್ಲಿದೂರುದಾಖಲಾಗಿ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ. 

ತೀವ್ರ ಹಲ್ಲೆಗೊಳಗಾಗಿರುವ ಗೀತಾ ಶಾಶ್ವತ ಅಂಗವಿಕಲಳಾಗಬಹುದುಎಂದು ವೈದ್ಯರು ಸಲಹೆ ನೀಡಿದ್ದಾರೆ. ಅಲ್ಲದೆ, ಅವಳಿಗೆ ಪ್ರಾಣ ಭೀತಿಯುಕಾಡುತ್ತಿದೆ. ಆದ್ದರಿಂದ ಗಾಯಾಳು ಗೀತಾಳಿಗೆ ಸೂಕ್ತ ರಕ್ಷಣೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಬೇಕು. ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ. 

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಮಂಜುನಾಥ ಮುನ್ನೋಳಿ, ಗಾಯಾಳು ಮಹಿಳೆಗೆ ಸರ್ಕಾರದಿಂದ ಸಿಗಬಹುದಾದಎಲ್ಲ ಸವಲತ್ತುಗಳನ್ನು ಶೀಘ್ರ ಒದಗಿಸಲುಎಲ್ಲಕ್ರಮ ಕೈಗೋಳ್ಳಲಾಗುವುದು.ಈ ಕೂಡಲೇ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಆಸ್ಪತ್ರೆಗೆ ಕಳುಹಿಸಿ ಗಾಯಾಳುವಿನ ಆರೋಗ್ಯ ವಿಚಾರಿಸಿ ಮಾಹಿತಿ ಸಂಗ್ರಹಿಸಲಾಗುವುದು ಎಂದರು. 

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಲಕ್ಷ್ಮಣ ದೊಡ್ಡಮನಿ, ಜಯಕರ್ನಾಟಕ ಸಂಘಟನೆಯ ಧಾರವಾಡ ಜಿಲ್ಲಾಧ್ಯಕ್ಷ ಸುಧೀರ ಮುದೋಳ, ಭೋವಿ ಸಮಾಜದ ಮುಖಂಡ ಬಸವರಾಜ ರುದ್ರಾಪುರ, ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಆನೇಗುಂದಿ, ಕದಂಬ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಾರುತಿ ನಾಯಕ, ಮುಖಂಡರಾದ ರಮಾನಂದ ಕಮ್ಮಾರ, ಕಿಶೋರಕಟ್ಟಿ, ದುರಗಪ್ಪ ವಡ್ಡರ, ಅನಸೂಯಾ ಬಳಿಗಾರ, ಇಂದುಮತಿ ವಿರಕ್ತಮಠ, ಸತೀಶ ಸರ್ಜಾಪುರ, ಬಸವರಾಜ ವಡ್ಡರ ನಾಗರಾಜ ವಡ್ಡರ, ಶಂಕರ ಶಿವಳ್ಳಿ, ನಿಂಗಪ್ಪ ಶಿವಳ್ಳಿ, ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ