ಪ್ಲಾಸ್ಟಿಕ್ ಮುಕ್ತ ಅಭಿಯಾನ
ಯರಗಟ್ಟಿ 03: ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಯರಗಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದ ಭಾಗವಾಗಿ, ಕೇಂದ್ರ, ರಾಜ್ಯ ಸರಕಾರದ ಆದೇಶ ಹಾಗೂ ಹಸಿರು ನ್ಯಾಯಾಧಿಕರಣ ಮಂಡಳಿ ನಿರ್ದೇಶನದಂತೆ ಏಕ್ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ನಿಷೇಧ ಕುರಿತು ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತು.
ಜಾಥಾದಲ್ಲಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜುಲೈ 1, 2022 ರಿಂದ ಏಕ್ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ನಿಷೇಧ ವಾಗಿದ್ದು, ಈ ಕುರಿತು ಪಟ್ಟಣ ಪಂಚಾಯಿತಿ ವತಿಯಿಂದ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಪತ್ರಿಕಾ ಪ್ರಕಟಣೆ, ಜಾಹೀರಾತು, ಕರ ಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಿದ್ದು ಇರುತ್ತದೆ, ಅಕ್ಟೋಬರ್ 2 ರಿಂದ ಪಟ್ಟಣದ ವ್ಯಾಪ್ತಿಯಲ್ಲಿ ಏಕ್ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ, ಮಾರಾಟ ಮತ್ತು ಸಂಗ್ರಹಣೆ ಕಂಡು ಬಂದಲ್ಲಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಲ್ಲದೇ ಇನ್ನೂ ಮುಂದೆ ಸಾರ್ವಜನಿಕರು ಹಾಗೂ ಗ್ರಾಹಕರ ಕೈಯಲ್ಲಿ ಪ್ಲಾಸ್ಟಿಕ್ ಕ್ಯಾರೀಬ್ಯಾಗ ಕಂಡು ಬಂದಲ್ಲಿ ಅಂಥವರಿಗೇ ದಂಡ ವಿಧಿಸಲಾಗುವುದು ಎಂದು ಮುಖ್ಯಾಧಿಕಾರಿ ಡಿ.ಎನ್ ತಹಶೀಲ್ದಾರ ತಿಳಿಸಿದರು.
ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ನೀರೀಕ್ಷಕ ಪಿ. ಎನ್. ಪಾಟೀಲ, ಎಸ್ಡಿಸಿ ಆನಂದ ಬೆಳವಿ, ರೇಣುಕಾ ಹಲಗಿ, ಪ. ಪಂ. ಸಿಬ್ಬಂದಿಯಾದ ಅಡಿವೆಪ್ಪ ಇಟಗೌಡ್ರ, ರಾಜು ಹಿರೇಮಠ, ಸುನೀಲ ಗಿರಿಸಾಗರ, ಶಿಕ್ಷಕರಾದ ಸುಂದರ ಸತ್ತಿಗೇರಿ, ಎಮ್. ಎನ್. ಚವಡಪ್ಪನವರ, ಯಲ್ಲಪ್ಪ ನಾಯ್ಕರ, ಬಿ. ಎಂ. ಸರದಾರ, ಬಿ. ಬಿ. ನಿರ್ವಾನಿ ಸೇರಿದಂತೆ ಅನೇಕ ಇದ್ದರು.