ಚಿಕ್ಕೋಡಿ

ರಸ್ತೆಯಲ್ಲಿ ಪೈಪ್ ಲೈನ್ ಲಿಕೇಜ್ ಗ್ರಾ.ಪಂ ವಿರುದ್ಧ ಸ್ಥಳೀಯರ ಆಕ್ರೋಶ

ರಸ್ತೆಯಲ್ಲಿ ಪೈಪ್ ಲೈನ್ ಲಿಕೇಜ್ ಗ್ರಾ.ಪಂ ವಿರುದ್ಧ ಸ್ಥಳೀಯರ ಆಕ್ರೋಶ

ಮಾಂಜರಿ: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡು ರಸ್ತೆಯಲ್ಲಿ ಪೈಪ್ ಲೈನ್ ಲಿಕೇಜ್(ಸೋರಿಕೆ)ಯಾಗಿ ಹಲವು ದಿನ ಕಳೆದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಗ್ರಾಮಪಂಚಾಯಿತಿಯವರು ರಿಪೇರಿ ಮಾಡದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. 

ಅಂಕಲಿ ಗ್ರಾಮದ ಬಸ್ ನಿಲ್ದಾಣ ಬಳಿ ರಾಯಬಾಗ ಅಂಕಲಿ ರಸ್ತೆ ಮದ್ಯೆ ಪೈಪ್ ಲೈನ್ ಲಿಕೆಜ್ ಆಗಿ ಹಲವು ದಿನಗಳು ಕಳೆದಿವೆ. ಈ ರಸ್ತೆಯಿಂದ ಚಿಕ್ಕೋಡಿ, ಮೀರಜ ಸೇರಿದಂತೆ ಅನೇಕ ವಾಹನಗಳ ಓಡಾಟ ಮಾಡುವುದರ ಜೊತೆಗೆ ಕಬ್ಬುತುಂಬಿಕೊಂಡು ಟ್ರ್ಯಾಕ್ಟರಗಳು ಹೋಗುತ್ತಿವೆ.ನಿತ್ಯವೂ ಇಲ್ಲಿ ಅಪಘಾತಗಳು ಆಗುತ್ತಿರುವುದರಿಂದ ಅಲ್ಲಿ ವ್ಯಾಪಾರಸ್ಥರು ಈ ದಾರಿಗೆ ಬ್ಯಾರಿಕೆಡ್ ಇಟ್ಟು ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಈ ರಸ್ತೆಯಲ್ಲಿ ಬಸ್ ಸ್ಟ್ಯಾಂಡ್ ಕಟ್ಟಡ ಇರೋದರಿಂದ ತುಂಬಾ ಸಂಚಾರ ಸಮಸ್ಯೆ ಎದುರಾಗುತ್ತಿದೆ. ಅಧಿಕಾರಿಗಳು ಕಂಡು ಕೇಳರಿಯದಂಗೆ ಇದ್ದಾರೆ. 

ದಿನನಿತ್ಯ ಅಂಕಲಿಯಲ್ಲಿ ನೀರಿಂದ ಕೊಳಚೆ ವಾತಾವರಣ. ಮಳೆಗಾಲದಲ್ಲಿ ಯಾವರೀತಿ ಇರುತ್ತದೆಯೋ ಅದೇರಿತಿ ಇದೆ. ಲೀಕೆಜ್ ಆಗಿ ಬಹಳ ದಿನವಾಗಿದೆ. ಯಾರೂ ಗಮನಹರಿಸಿಲ್ಲ. ಮತ್ತು ಅಪಘಾತಗಳೂ ನಡೆಯುತ್ತಿವೆ. ತಕ್ಷಣ ರಿಪೇರಿ ಮಾಡಿ ಜನರಿಗೆ ಅನುಕೂಲ ಮಾಡಬೇಕಿದೆ ಎಂದು ಬಾಳಾಸಾಹೇಬ ಕೋಟಿ ವಾಲೆ ಮನವಿಯನ್ನು ಮಾಡಿಕೊಂಡಿದ್ದಾರೆ.ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಲೀಕೆಜ್ ಆಗಿರುವುದನ್ನು ತಡೆಗಟ್ಟಿ ನೀರು ಪೊಲೂ ತಪ್ಪಿಸುವುದು ಹಾಗೂ ಅಪಘಾತ ತಪ್ಪಿಸುತ್ತಾರಾ ಎಂದು ಕಾದು ನೋಡಬೇಕು. ಅಂಕಲಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಕುಡಿಯುವ ನೀರು ಪೈಪ್ ಲೈನ್ ಲಿಕೇಜ್ ಆಗಿ ಸೋರಿತ್ತಿರುವ ನೀರು 


ಸುದ್ದಿ ಓದಿ