ಮಾಜಿ ಶಾಸಕ ಎಂ.ಪಿ.ರವೀಂದ್ರ ಪುಣ್ಯ ಸ್ಮರಣೆ
ಮಾಜಿ ಶಾಸಕ ಎಂ.ಪಿ.ರವೀಂದ್ರ ಪುಣ್ಯ ಸ್ಮರಣೆ
ಹೂವಿನಹಡಗಲಿ : ಮಾಜಿ ಶಾಸಕರಾದ ದಿವಂಗತ ಎಂಪಿ ರವೀಂದ್ರರವರ ಆರನೇ ಪುಣ್ಯ ಸ್ಮರಣೆಯನ್ನು ಹೂವಿನಹಡಗಲಿ ಅವರ ಸಮಾಧ ಬಳಿ ನುಡಿ ನಮನ ಸಲ್ಲಿಸಿದರು. ಹೂವಿನಹಡಗಲಿ ಗವಿಮಠದ ಪರಮಪೂಜ್ಯ ಶ್ರೀ ಮ ನಿ ಪ್ರ ಡಾ. ಹಿರಿ ಶಾಂತವೀರಸ್ವಾಮಿಗಳು ಹಾಗೂ ಹಿರೇಮಲ್ಲನ ಕೇರಿ ಮಠದ ಶ್ರೀ ಮ ನಿ ಪ್ರ ಅಭಿನವ ಚನ್ನಬಸವ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪ್ರೊ ಶಾಂತ ಮೂರ್ತಿ ಬಿ ಕುಲಕರ್ಣಿ ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಎಂಪಿ ಪ್ರಕಾಶ್ ಮತ್ತು ಎಂಪಿ ರವೀಂದ್ರರವರ ಕಾರ್ಯಗಳನ್ನು ಸ್ಮರಿಸಿದರು. ಹೂವಿನ ಹಡಗಲಿಯನ್ನು ಇಡೀ ರಾಜ್ಯದಲ್ಲಿ ಮಾದರಿ ತಾಲೂಕಾಗಿ ಪರಿವರ್ತನೆ ಮಾಡಿದ ಕೀರ್ತಿ ಎಂ ಪಿ ಪ್ರಕಾಶ್ ಮತ್ತು ಎಂಪಿ ರವೀಂದ್ರ ಅವರಿಗೆ ಸಲ್ಲುತ್ತದೆ. ಅನೇಕ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುವುದರ ಮೂಲಕ ಹಾಗೂ ರಂಗಭಾರತಿ ಅಂತಹ ಸಂಸ್ಥೆಯನ್ನು ಕಟ್ಟುವುದರ ಮೂಲಕ ಹೂವಿನಹಡಗಲಿಯನ್ನು ಸಾಂಸ್ಕೃತಿಕ ಪಟ್ಟಣವನ್ನಾಗಿ ಪರಿವರ್ತನೆ ಮಾಡಿದ್ದಾರೆ ಎಂದರು. ನಂತರ ಪ್ರಕಾಶ್ ಜೈನ್ ಅವರಿಂದ ಗೀತ ನಮನ ಕಾರ್ಯಕ್ರಮ ನಡೆಯಿತು ರಂಗಭಾರತಿ ಕಾರ್ಯಧ್ಯಕ್ಷರಾದ ಎಂಪಿ ಸುಮಾ ವಿಜಯ್ ಎಂಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಎಂ ಪಿ ವೀಣಾ ಮಾಂತೇಶ್ ಮಹಾಂತೇಶ್ ತಥಾ ಗತ್ ಹಾರ್ಟ್ ಕೇರ್ ಸೆಂಟರ್ ಬೆಂಗಳೂರಿನ ಮುಖ್ಯಸ್ಥರಾದ ಡಾಕ್ಟರ್ ಮಹಾಂತೇಶ್ ಚರಂತಿಮಠ. ಮಾಜಿ ಪುರಸಭಾ ಸದಸ್ಯರಾದ ಸಂತೋಷ್ ಜೈನ್, ಹನುಮಂತಪ್ಪ, ಮಲ್ಲಿಕಾರ್ಜುನ್ ಮಲ್ಕಿ ಒಡೆಯರ್ , ಪ್ರಕಾಶ್ ಎಲಗಚ್ಚಿನ, ಸಂಜೋತ ಜೈನ್, ಬಾವಿ ಮನೆ ಕೊಟ್ರೇಶ್ ಹಾಗೂ ಅವರ ಅಭಿಮಾನಿಗಳು ಉಪಸ್ಥಿತರಿದ್ದರು. ಪಿಎಂ ಕೊಟ್ರಸ್ವಾಮಿ ನಿರೂಪಿಸಿದರು ಮಂಜುನಾಥ್ ವಿ ಪಾಟೀಲ್ ವಂದಿಸಿದರು