ಯರಗಟ್ಟಿ

ಛಾಯಾಗ್ರಾಹಕ ವತ್ತಿಗೆ 175 ವರ್ಷದ ಇತಿಹಾಸ: ವಿಶ್ವಾಸ ವೈದ್ಯ

ಛಾಯಾಗ್ರಾಹಕ ವತ್ತಿಗೆ 175 ವರ್ಷದ ಇತಿಹಾಸ: ವಿಶ್ವಾಸ ವೈದ್ಯ

ಯರಗಟ್ಟಿ 16: ಛಾಯಾಗ್ರಾಹಕ ವತ್ತಿಗೆ 175 ವರ್ಷದ ಇತಿಹಾಸವಿದೆ. ಪ್ರಾರಂಭದಲ್ಲಿದ್ದ ಕ್ಯಾಮರಾಗಳು ಇಂದು ಸುಧಾರಣೆಗೊಂಡಿದ್ದು, ಇಂದು ಯಾರು ಬೇಕಾದರೂ ಛಾಯಾಗ್ರಾಹಕರಾಗಬಹುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.  

ಪಟ್ಟಣದ ಮಹಾಂತ ದುರದುಂಡೇಶ್ವರ ಶ್ರೀಮಠದಲ್ಲಿ ನಡೆದ ತಾಲೂಕು ಛಾಯಾಗ್ರಾಹಕರ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕ್ಯಾಮರಾ ಉಪಯೋಗಿಸುವವರು ಛಾಯಾಗ್ರಾಹಕರಾಗಲು ಸಾಧ್ಯವಿಲ್ಲ.  

ಇದೊಂದು ತಪಸ್ಸಿನಂತಹ ಕೆಲಸ ಶ್ರದ್ಧೆ, ನಿಷ್ಠೆಯಿಂದ ಕೆಲಸಮಾಡಿದರೆ ಈ ವೃತ್ತಿಯಲ್ಲಿ ಸಾಧನೆ ಮಾಡಬಹುದು ಎಂದು ಹೇಳಿದರು. ಸಾನ್ನಿಧ್ಯ ವಹಿಸಿ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಯಾವುದೇ ಕ್ಷೇತ್ರದಲ್ಲೂ ಸಂಘಟನೆಯಿಲ್ಲದಿದ್ದರೆ ಸಾಧನೆ ಸಾಧ್ಯವಿಲ್ಲ. ಹೀಗಾಗಿ ಸಂಘಟನೆಯ ಅವಶ್ಯಕತೆ ಎಲ್ಲರಿಗೂ ಇದೆ ಎಂದು ಹೇಳಿದರು. ಅಸೋಯೇಶನ್ ತಾಲೂಕು ಘಟಕದ ಅಧ್ಯಕ್ಷ ಪ್ರಮೋದ ಬಡಿಗೇರ, ಮಲ್ಲಿಕಾರ್ಜುನ ಕೆ.ಆರ್, ಲಕ್ಷ್ಮಣ ಯಮಕನಮರಡಿ, ಬಸವರಾಜ ರಾಮಣ್ಣವರ, ಅಶೋಕ ಹಾದಿಮನಿ, ಭಾಸ್ಕರ ಹಿರೇಮೇತ್ರಿ, ಸುರೇಶ ಭಜಂತ್ರಿ, ನಿಖಿಲ ಪಾಟೀಲ, ಫಕ್ಕೀರ​‍್ಪ ಹದ್ದನವರ, ಹನಮಂತ ಹಾರುಗೊಪ್ಪ, ಸಲಿಂಬೇಗ ಜಮಾದಾರ, ಶಂಕರ ಇಟ್ನಾಳ, ವಿಕ್ರಮ ಇಂಗಳೆ, ಚನ್ನಪ್ಪ ಪಣದಿ, ಮಹಾಂತೇಶ ಡವಳೇಶ್ವರ, ಪ್ರಜ್ವಲ ಮುದ್ದಾಗಿ, ರಮೇಶ ದಳವಾಯಿ ಹಾಗೂ ಸಂಘದ ಸದಸ್ಯರು ಇದ್ದರು. 

ಸುದ್ದಿ ಓದಿ